Header Ads
Header Ads
Breaking News

ಪುತ್ತೂರು : ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆ

ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆ ಕಾರ್ಯಕ್ರಮವು ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ದೇಶಕ್ಕೆ ಆಧ್ಯಾತ್ಮಿಕವಾಗಿ ಋಷಿಮುನಿಗಳ ಪರಂಪರೆ ತನ್ನದೇ ಆದ ಛಾಪು ಮೂಡಿಸಿದ್ದು, ಈ ನಿಟ್ಟಿನಲ್ಲಿ ಶ್ರೀ ಸವಿತಾ ಮಹರ್ಷಿಗಳು ಸಮಾಜಕ್ಕೆ ಕೊಡುಗೆಗಳನ್ನು ನೀಡುವ ಮೂಲಕ ಋಷಿ ಮುನಿಗಳ ಬದುಕು, ವಿಚಾರಧಾರೆ ಹೇಗಿದೆ ಎಂಬುದನ್ನು ಮುಂದಿನ ಪೀಳಿಗೆಗೆ ತೋರಿಸಿಕೊಟ್ಟಿದ್ದಾರೆ ಎಂದರು.

ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸಹಶಿಕ್ಷಕಿ ಜೆಸ್ಸಿ ಪಿ.ವಿ. ಸಂಸ್ಮರಣಾ ಉಪನ್ಯಾಸ ನೀಡಿ, ಸಾಮುವೇದದ ಕೃರ್ತ, ಸವಿತಾ ಸಮಾಜದ ಮೂಲಪುರುಷ ಎನಿಸಿಕೊಂಡ ಶ್ರೀ ಸವಿತಾ ಮಷರ್ಷಿಗಳ ಆಚರಣೆ ಪ್ರಸ್ತುತ ಅಗತ್ಯ. ಇಂತಹಾ ಮೂಲಪುರುಷನಿಂದ ಹುಟ್ಟಿಕೊಂಡ ಸವಿತಾ ಸಮಾಜಕ್ಕೆ ಚಾರಿತ್ರಿಕವಾಗಿ ಮನ್ನಣೆಯಿದೆ ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸಮಿತಿ ಅಧ್ಯಕ್ಷ, ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್, ಉಪತಹಶೀಲ್ದಾರ್ ಶ್ರೀಧರ ಕೊಡಿಜಾಲ್, ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಸೆಲ್ವರಾಜ್ , ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಸವಿತಾ ಸಮಾಜ ಬಾಂಧವರು ಉಪಸ್ಥಿತರಿದ್ದರು.

Related posts

Leave a Reply