Header Ads
Header Ads
Breaking News

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿಯಲ್ಲಿದ್ದಾರೆ ’ಜನಮೆಚ್ಚುಗೆ’ಯ ವೈದ್ಯರು

 ವೈದ್ಯರು ಜನರ ಮೆಚ್ಚುಗೆ ಗಳಿಸಬೇಕಾದರೆ ಹರಸಾಹಸ ಪಡಬೇಕು. ಅದರಲ್ಲೂ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಜನರ ಪ್ರೀತಿಯ ಮಟ್ಟಕ್ಕೆ ಬೆಳೆಯಬೇಕಾದರೆ ಅವರಿಗೆ ಅತ್ಯಂತ ಹೆಚ್ಚು ತಾಳ್ಮೆ ಬೇಕು. ಮಾನವೀಯ ಗುಣಗಳಿರಬೇಕು. ವೈದ್ಯಕೀಯ ಪ್ರವೀಣರಾಗಿರಬೇಕು. ಇಂತಹ ಗುಣಗಳನ್ನು ಪಡೆದ ವೈದ್ಯರೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಮಾಡುತ್ತಾ ಜನ ಮೆಚ್ಚುಗೆಯ ವೈದ್ಯರಾಗಿ ಮೂಡಿಬಂದಿದ್ದಾರೆ. ಅವರು ಯಾರು ಅಂತಾ ಕೇಳ್ತಾ ಇದ್ದೀರಾ? ಹಾಗಿದ್ರೆ ಈ ರಿಪೋರ್ಟ್ ನೋಡಿ.

 ಸರ್ಕಾರಿ ಆಸ್ಪತ್ರೆಗಳ ವೈದ್ಯರು ಜನರ ಪ್ರೀತಿಯ ಮಟ್ಟಕ್ಕೆ ಬೆಳೆಯಬೇಕಾದರೆ ಅವರಿಗೆ ಅತ್ಯಂತ ಹೆಚ್ಚು ತಾಳ್ಮೆ ಬೇಕು. ಮಾನವೀಯ ಗುಣಗಳಿರಬೇಕು. ವೈದ್ಯಕೀಯ ಪ್ರವೀಣರಾಗಿರಬೇಕು. ಇಂತಹ ಗುಣಗಳನ್ನು ಪಡೆದ ವೈದ್ಯರೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಹೆಸರು ಡಾ.ಸುಧಾಕರ್. ದಿನವೊಂದಕ್ಕೆ 150ರಿಂದ 200ಮಂದಿ ರೋಗಿಗಳನ್ನು ಚಿಕಿತ್ಸೆ ಮಾಡುವ ಡಾ.ಜಗದೀಶ್ ಎಷ್ಟೇ ಪರಿಸ್ಥಿತಿಯಲ್ಲೂ ತಮ್ಮ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಬೆಳಿಗ್ಗೆ 9 ಗಂಟೆ ಬದಲಿಗೆ 8.15ಕ್ಕೆ ಆಸ್ಪತ್ರೆಗೆ ಹಾಜರಾಗುವ ಇವರ ಕೊಠಡಿಯ ಮುಂದೆ ಸಾಲು ಸಾಲು ರೋಗಿಗಳ ಸರದಿ. ’ಡಾ. ಜಗದೀಶ್ ಉಲ್ಲೆರಾ..!’ ಎಂದು ಕೇಳಿಯೇ ಸರದಿ ಸಾಲಿನಲ್ಲಿ ನಿಲ್ಲುವ ರೋಗಿಗಳ ಸಂಖ್ಯೆ ಅಪಾರ.

 ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 3 ವರ್ಷಗಳಿಂದ ಸೀನಿಯರ್ ಮೆಡಿಕಲ್ ಆಫೀಸರ್ ಹುದ್ದೆಯಲ್ಲಿ ಹಿರಿಯ ವೈದ್ಯಾಧಿಕಾರಿಯಾಗಿ ಸೇವೆ ಮಾಡುತ್ತಿರುವ ಸುಧಾಕರ್ ಅವರು ಹಲವು ಸಮಯದಿಂದ ನಿಯೋಜನೆಯಡಿಯಲ್ಲಿ ಉಪ್ಪಿನಂಗಡಿ ಸರ್ಕಾರಿ ಆಸ್ಪತ್ರೆಯಲ್ಲೂ ವಾರದಲ್ಲಿ 2 ದಿನ ರೋಗಿಗಳ ಆರೋಗ್ಯ ತಪಾಸಣೆಗೆ ಲಭ್ಯವಾಗುತ್ತಿದ್ದಾರೆ. ದಿನವೊಂದರಲ್ಲಿ 270 ಮಂದಿ ರೋಗಿಗಳ ತಪಾಸಣೆ ಮಾಡಿದ ದಾಖಲೆಯೂ ಇವರದ್ದಾಗಿದೆ. ಮಮತೆ ಪ್ರೀತಿ ವಾತ್ಸಲ್ಯ ರೋಗಿಗಳ ಸಮಸ್ಯೆಯನ್ನು ಅರ್ಧದಷ್ಟು ಪರಿಹಾರ ಮಾಡುತ್ತದೆ ಎಂಬ ಮಾತಿನಂತೆ ನಡೆದುಕೊಳ್ಳುತ್ತಿರುವ ಡಾ, ಜಗದೀಶ್ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿಯೇ ಪೂರ್ಣಕಾಲಿಕ ವೈದ್ಯರಾಗಿರಬೇಕು ಎಂಬುವುದು ಇವರ ಬಳಿ ಚಿಕಿತ್ಸೆ ಪಡೆದ, ಪಡೆಯುತ್ತಿರುವ ಜನತೆಯ ಮಹದಾಸೆಯಾಗಿದೆ.

 ಮೂಡುಶೆಡ್ಡೆಯ ಟಿ.ಬಿ.ಆಸ್ಪತ್ರೆಯಲ್ಲಿ ಮೊದಲು ವೃತ್ತಿ ಆರಂಭಿಸಿದ ಡಾ.ಜಗದೀಶ್ ಅವರು ಸರಳ ಸಜ್ಜನಿಕೆ ವ್ಯಕ್ತಿ. ರೋಗಿಗಳ ಜತೆ ಆತ್ಮೀಯತೆಯಿಂದ ಬೆರೆಯುವ ಇವರ ಗುಣ ರೋಗಿಗಳ ಪ್ರೀತಿ ಗಳಿಸಲು ಅತೀ ಮುಖ್ಯ ಕಾರಣ. ಎಲ್ಲಾ ಜನರಲ್ ಕಾಯಿಲೆಗಳಿಗೆ ಔಷಧಿ ನೀಡುವ ಅವರು ರೋಗಿಗಳ ಒತ್ತಡದ ಹಿನ್ನಲೆಯಲ್ಲಿ ಎಷ್ಟೋ ದಿನಗಳು ಮಧ್ಯಾಹ್ನ ಊಟವೇ ಮಾಡುವುದಿಲ್ಲ. ಕೇವಲ ೨ ಬಿಸ್ಕತ್ತು ತಿಂದು ನೀರು ಕುಡಿದು ರೋಗಿಗಳ ಆರೋಗ್ಯ ತಪಾಸಣೆ ಮಾಡುವ ಈ ವೈದ್ಯರು ಸೇವೆಗೆ ಮತ್ತೊಂದು ಪರ್ಯಾಯ ಹೆಸರು.
ದಿನದ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ತಮ್ಮಲ್ಲಿ ಬರುವ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುವ ಡಾ.ಜಗದೀಶ್ ಕರ್ತವ್ಯಕ್ಕಿಂತಲೂ ಸೇವೆ ದೊಡ್ಡದೆಂದು ನಂಬಿದವರು. ಇವರ ಸೇವೆ ಹೀಗೆಯೇ ಮುಂದುವರೆಯಲಿ ಎನ್ನುವುದು ಎಲ್ಲರ ಆಶಯವಾಗಿದೆ.

Related posts

Leave a Reply

Your email address will not be published. Required fields are marked *