Header Ads
Breaking News

ಮರ ರಸ್ತೆಯ ಮೇಲೆ ಬಿದ್ದು ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತ

ಕಡಬ: ಬಿಳಿನೆಲೆ ಗ್ರಾಮದ ಸಿ.ಪಿ.ಸಿ.ಆರ್,ಐ ಬಳಿ ರಸ್ತೆ ಬದಿಯಲ್ಲಿದ್ದ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆ ಫೆ.22ರ ರಾತ್ರಿ.7.30ರ ವೇಳೆ ನಡೆದಿದೆ.

ರಸ್ತೆಗೆ ಅಡ್ಡಲಾಗಿ ಬಿದ್ದ ಹಿನ್ನಲೆಯಲ್ಲಿ ಸುಮಾರು 1 ಗಂಟೆಗಳ ಕಾಲ ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು.

ಬಳಿಕ ಸಾಮಾಜಿಕ ಮುಂದಾಳು ರಮೇಶ್ ವಾಲ್ತಾಜೆ ಸೇರಿದಂತೆ ಪ್ರಮುಖರು ಅರಣ್ಯ ಹಾಗೂ ಮೆಸ್ಕಾಂ ಇಲಾಖೆಗೆ ಮಾಹಿತಿ ನೀಡಿದ್ದು ಬಳಿಕ ಆಗಮಿಸಿದ ಇಲಾಖೆಯವರು ಸಾರ್ವಜನಿಕರ ಸಹಾಯದಿಂದ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿದರು.

ಘಟನೆಯಲ್ಲಿ ಎರಡು ವಿದ್ಯುತ್ ಕಂಬಗಳು ಮುರಿದಿದೆ ಎಂದು ತಿಳಿದು ಬಂದಿದೆ..

Related posts

Leave a Reply

Your email address will not be published. Required fields are marked *