Header Ads
Breaking News

ಜ.18ರಂದು ಮಂಗಳೂರು ಪುರಭವನದಲ್ಲಿ ರಾಮಕ್ಷತ್ರಿಯ ಪ್ರೋ ಕಬ್ಬಡಿ- 2020

ರಾಮಕ್ಷತ್ರಿಯ ಕಬಡ್ಡಿ ಅಸೋಸಿಯೇಶನ್ ಮಂಗಳೂರು ಮತ್ತು ರಾಮಕ್ಷತ್ರೀಯ ಸೇವಾ ಸಂಘ ಮಂಗಳೂರು ಇದರ ವತಿಯಿಂದ ಪುರುಷರ ರಾಮಕ್ಷತ್ರಿಯ ಪ್ರೋ ಕಬ್ಬಡಿ 2020 ಪಂದ್ಯಾಟವು ಜನವರಿ 18ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಮಂಗಳೂರು ವಲಯ ಅರಣ್ಯಾಧಿಕಾರಿ ಶ್ರೀ ಪಿ. ಶ್ರೀಧರ್ ತಿಳಿಸಿದರು

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇರಳ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅನೇಕ ಸ್ವರ್ಧಿಗಳು ಭಾಗವಹಿಸಲಿದ್ದಾರೆ. ಈ ಪಂದ್ಯಾಟದಲ್ಲಿ ಒಟ್ಟು 8 ತಂಡಗಳಿದ್ದು, 80 ಆಟಗಾರರು ಭಾಗವಹಿಸಲಿದ್ದಾರೆ. ಈ ಕಬ್ಬಡಿ ಪಂದ್ಯವು ಹೊನಲು ಬೆಳಕಿನ ಪಂದ್ಯವಾಗಿದ್ದು ಪ್ರಾಯೋಗಿಕ ಪ್ರಯತ್ನವಾಗಿ ಪ್ರಥಮ ಬಾರಿಗೆ ಆಟಗಾರರನ್ನು ಬಿಡ್ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ನಡೆಸಲಾಗಿತ್ತು. ರಾಮಕ್ಷತ್ರಿಯ ಸಮಾಜ ಕ್ರೀಡಾ ಸಾಧಕರನ್ನು ನಾಡಿಗೆ ಪರಿಚಯಿಸಿ ಅವರನ್ನು ಈ ಕ್ರೀಡಾ ಕೂಟದ ಮೂಲಕ ಸಂಘಟಿಸಲು ಅನುಕೂಲವಾಗಿದೆ. ಇನ್ನೂ ಈ ಕಾರ್ಯಕ್ರಮದ ಉದ್ಘಾಟನೆಯು ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರಾದ ಪಮ್ಮಿ ಕೊಡಿಯಾಲ್ ಬೈಲ್, ಕಾರ್ಯದರ್ಶಿ ಮುರಳೀಧರ್ ಸಿ.ಎಚ್, ಜೊತೆ ಕಾರ್ಯದರ್ಶಿ ಜಯಕರ್, ಅಜಿತ್ ಕುಮಾರ್ ಕೆ, ಕೋಶಾಧಿಕಾರಿ ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *