Header Ads
Breaking News

ಪುರಸಭೆಯ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಹಾಕಲಾದ ಒಣಕಸಕ್ಕೆ ಬೆಂಕಿ : ಜನರಲ್ಲಿ ಆತಂಕ ಮೂಡಿಸಿದ ಕಿಡಿಕೇಡಿಗಳು

ಬಂಟ್ವಾಳ: ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ಪುರಸಭೆಯ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಹಾಕಲಾದ ಒಣಕಸಕ್ಕೆ ಕಿಡಿಗೇಡಿಗಳು ಬುಧವಾರ ರಾತ್ರಿ ಬೆಂಕಿ ಹಚ್ಚಿದ್ದಾರೆ. ಇದರಿಂದ ಪ್ಲಾಸ್ಟಿಕ್‍ನಿಂದ ಹೊರ ಹೊಮ್ಮಿಂದ ಹೊಗೆ ಪರಿಸರದಲ್ಲಿ ಹಬ್ಬಿಕೊಂಡಿದ್ದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ವಿರೋಧದ ನಡುವೆಯೂ ನ್ಯಾಯಾಲಯ ಹಾಗೂ ಸಹಾಯಕ ಕಮೀಷನ್ ಅವರ ಆದೇಶದನ್ವಯ ಬುಧವಾರ ಸಂಜೆ ಬಂಟ್ವಾಳ ಪುರಸಭೆ ಒಣಕಸವನ್ನು ಕಂಚಿನಡ್ಕ ಪದವಿನ ತಾಜ್ಯ ಸಂಸ್ಕರಣ ಘಟಕಕ್ಕೆ ಸಾಗಿಸಿದೆ. ಈ ಸಂದರ್ಬ ಪ್ರತಿಭಟನಕಾರರು ಹಾಗೂ ಪೊಲೀಸರ ಮಧ್ಯೆ ಎಳೆದಾಟ ನಡೆದಿದ್ದು ಕೆಲವರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆದರೆ ಮಧ್ಯರಾತ್ರಿಯ ವೇಳೆ ಕೆಲ ಕಿಡಿಗೇಡಿಗಳು ಘಟಕದೊಳಗೆ ಅಕ್ರಮ ಪ್ರವೇಶಗೈದು ಒಣಕಸಕ್ಕೆ ಬೆಂಕಿ ಹಂಚಿ ವಿಕೃತಿ ಮೆರೆದಿದ್ದಾರೆ. ಒಣ ಕಸದಲ್ಲಿ ಪ್ಲಾಸ್ಟಿಕ್ ಕೂಡ ಇದ್ದು ಕಸಕ್ಕೆ ಬೆಂಕಿ ಹಂಚಿದವರ ವಿರುದ್ದ ಕ್ರಮ ಜರುಗಿಸವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಈ ಕಿಡಿಗೇಡಿಗಳ ವಿರುದ್ದ ದೂರು ನೀಡಲು ಪುರಸಭೆ ತೀರ್ಮಾನಿಸಿದೆ. ಕಸ ಹಾಕಿರುವುದು ಜಿಲ್ಲಾಡಳಿತ ಹಾಗೂ ಪುರಸಭೆಯ ಏಕಪಕ್ಷೀಯ ನೀತಿ ಎಂದು ಆರೋಪಿಸಿ ಸಜೀಪನಡು ಗ್ರಾಮಸ್ಥರು ಗುರುವಾರ ಬಂದ್ ಆಚರಿಸಿದರು.

Related posts

Leave a Reply

Your email address will not be published. Required fields are marked *