Header Ads
Breaking News

ಪೆರಾಜೆ ಗ್ರಾ.ಪಂ.ನಲ್ಲಿ ಬಿಜೆಪಿ ಆಡಳಿತಕ್ಕೆ ರಜತ ಸಂಭ್ರಮ-ಸಮಾವೇಶ

ಗ್ರಾಮಮಟ್ಟದಲ್ಲಿನ ಅಭಿವೃದ್ಧಿ ವಿಚಾರಗಳು ಬಿಜೆಪಿಯ ಸತತ ಗೆಲುವಿಗೆ ಕಾರಣವಾಗಿದೆ. ಇಂತಹ ಗೆಲುವುಗಳು ಸಮರ್ಥ ಕಾರ್ಯಕರ್ತರ ಪಡೆ ಇದ್ದರೆ ಮಾತ್ರ ಸಾಧ್ಯ ಎಂದು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್‍ಸಿಂಹ ಹೇಳಿದರು.

ಅವರು ಪೆರಾಜೆ ಗ್ರಾ.ಪಂ.ನಲ್ಲಿ ಬಿಜೆಪಿ ಆಡಳಿತಕ್ಕೆ ಬಂದು 25ವರ್ಷ ಪೂರ್ಣಗೊಳ್ಳುತ್ತಿದ್ದು, ಇದರ ಅಂಗವಾಗಿ ಪೆರಾಜೆ ಬಿಜೆಪಿ ಸಮಿತಿ ವತಿಯಿಂದ ಪೆರಾಜೆ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನಡೆದ ರಜತಸಂಭ್ರಮದ ಸಮಾವೇಶದಲ್ಲಿದಲ್ಲಿ ಮಾತನಾಡಿ ಸಂಸದರ ನಿಧಿ ಕಡೆಯಾಗಿರುವ ಕಾರಣ ಅಭಿವೃದ್ಧಿ ವಿಚಾರದಲ್ಲಿ ಕ್ಷೇತ್ರದ ಎಲ್ಲ ಕಡೆ ಹೆಚ್ಚಿನ ಗಮನ ನೀಡಲು ಆಗುತ್ತಿಲ್ಲ. ಜಿ.ಪಂ., ತಾ.ಪಂ.ಮೂಲಕ ಗ್ರಾ.ಪಂ.ಗಳಿಗೆ ಬರುತ್ತಿದ್ದ ಅನುದಾನಗಳನ್ನು 14ನೇ ಹಣಕಾಸು ಆಯೋಗದ ಮೂಲಕ ನೇರವಾಗಿ ಗ್ರಾ.ಪಂ.ಗಳಿಗೆ ಅನುದಾನಗಳು ಬರಲು ಆರಂಭಿಸುವ ಮೂಲಕ ಕೇಂದ್ರಸರಕಾರ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಿದೆ ಎಂದರು.

ಈ ಸಂದರ್ಭ ರಾಷ್ಟ್ರೀಯ ಸ್ವಯಂ ಸೇವಕಾ ಸಂಘ ಮಂಗಳೂರು ವಿಭಾಗ ಕಾರ್ಯವಾಹ ನ.ಸೀತಾರಾಮ, ಕೊಡಗು ಜೆಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಮುಖ್ಯ ಅಭ್ಯಗತರಾಗಿ ಕೊಡಗು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *