Header Ads
Breaking News

ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಸಂಭ್ರಮ: ಜ.10ರಂದು ಗೊನೆ ಮುಹೂರ್ತ

ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಸಂಭ್ರಮ  ಜನವರಿ 16 ರಂದು ದ್ವಜಾರೋಹಣಗೊಂಡು ಜನವರಿ 21 ರ ತನಕ ನಡೆಯುವ ಈ ಜಾತ್ರೋತ್ಸವ ಸಂಭ್ರಮಕ್ಕೆ ಜನವರಿ 10 ರಂದು ಗೊನೆ ಮುಹೂರ್ತ ಕಾರ್ಯಕ್ರಮವು ದೇವಾಲಯದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಕರ್ನಾಟಕ ಸರಕಾರ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ಬರುವ ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಆಡಳಿತಾಧಿಕಾರಿಯಾಗಿದ್ದ ಪದ್ಮನಾಭ ನೆಟ್ಟಾರುರವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪಿ. ಪದ್ಮನಾಭ ಶೆಟ್ಟಿಯವರಿಗೆ ದೇವಿ ಸಾನಿಧ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜವಾಬ್ದಾರಿಯನ್ನು ಹಸ್ತಾಂ ತರಿಸಿದರು.


ಈ ಸಂದರ್ಭದಲ್ಲಿ ನೂತನ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಪ್ರದಾನ ಅರ್ಚಕರಾದ ಶ್ರೀನಿವಾಸ ಹೆಬ್ಬಾರ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಸಮಿತಿಯ ನೂತನ ಸದಸ್ಯರಾದ ಪಿ. ವೆಂಕಟಕ್ರಷ್ಣ ರಾವ್, ಜಯಪ್ರಕಾಶ್ ರೈ ಬಿ, ಪಿ. ಜಗನ್ನಾಥ ರೈ,ದಾಮೋದರ ನಾಯ್ಕ, ನಾರಾಯಣ. ಕೆ, ಶ್ರೀಮತಿ ಭಾಗ್ಯಲಕ್ಷ್ಮೀ, ಶ್ರೀಮತಿ ಯಶೋದ ಎ.ಎಸ್. ಹಾಗೂ ಮಾಜಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ನಿರಂಜನ ಶೆಟ್ಟಿ ಉಪಸ್ಥಿತರಿದ್ದರು.


ದೇವಸ್ಥಾನದ ಸಮಿತಿ ಸದಸ್ಯರಾದ ವೆಂಕಟಕೃಷ್ಣ ರಾವ್ ಅವರ ತೋಟದಿಂದ ಬೇಂಡ್ ವಾದ್ಯ ,ವೇದ ಘೋಷಗಳೊಂದಿಗೆ ಗೊನೆ ಕಡಿದು ದೇವಸ್ಥಾನಕ್ಕೆ ತರಲಾಯಿತು. ನಂತರ ದೇವಸ್ಥಾನದಲ್ಲಿ ಪ್ರಾರ್ಥಿಸಿ ಗೊನೆ ಮುಹೂರ್ತ ನೇರವೇರಿತು.

ಜಾತ್ರೋತ್ಸವಕ್ಕೆ ಸಂಬಂಧಿಸಿದ ಧಾರ್ಮಿಕ ಪರಂಪರೆಯ ಧಾರ್ಮಿಕ ಸೇವಕರಿಗೆ ವಿಳ್ಯದೆಲೆ ಬೂಳ್ಯ ನೀಡುವುದರೊಂದಿಗೆ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು.

ಗೊನೆ ಮುಹೂರ್ತ ನಡೆದ ಬಳಿಕ ಭಕ್ತಾದಿಗಳಿಂದ ಅಂಗಣ ಸ್ವಚ್ಛತಾ ಕಾರ್ಯಕ್ರಮ ಶ್ರಮಸೇವೆ ಮೂಲಕ ನಡೆಯಿತು

Related posts

Leave a Reply

Your email address will not be published. Required fields are marked *