Header Ads
Breaking News

ಪೆರ್ಮನ್ನೂರು ಗ್ರಾಮದ ಗಂಡಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಶಿಲಾನ್ಯಾಸ

ಮಳೆಹಾನಿಗೆ ಸಂಬಂಧಿಸಿ ಸಂಸದರ 5 ಲಕ್ಷ ರೂ. ಅನುದಾನದಲ್ಲಿ ತೊಕ್ಕೊಟ್ಟು ಪೆರ್ಮನ್ನೂರು ಗ್ರಾಮದ ಗಂಡಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಅವರು ಶಿಲಾನ್ಯಾಸ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಅಭಿವೃದ್ಧಿಯಲ್ಲಿ ಬಿಜೆಪಿ ರಾಜಕೀಯ ಮಾಡಿಲ್ಲ. ಮಳೆಹಾನಿಗೆ ಸಂಬಂಧಿಸಿ ಹಾಗೂ ತಮ್ಮ ವಿಶೇಷ ನಿಧಿಯಡಿ ಸಂಸದರು ಮಂಗಳೂರು ಕ್ಷೇತ್ರದ 28 ಗ್ರಾಮಗಳಿಗೆ ಬೇಕಾದ ಕಡೆಗಳಲ್ಲಿ ಅನುದಾನ ಬಿಡುಗಡೆಗೊಳಿಸಿದ್ದಾರೆ ಎಂದು ಹೇಳಿದರು.

ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್‍ಹೌಸ್ ಮಾತನಾಡಿ, ರಸ್ತೆಯನ್ನೇ ಗಂಡಿ ಪ್ರದೇಶದ ಜನ ಕಂಡಿಲ್ಲ. ಸಂಸದರ ನಿಧಿಯಡಿ ರಸ್ತೆ ನಿರ್ಮಿಸುವಂತೆ ಹಿಂದಿನ ಅಧ್ಯಕ್ಷರ ಮೂಲಕ ಮನವಿ ಮಾಡಿಕೊಂಡಿದ್ದು, 46 ಲಕ್ಷ ರೂ ಅನುದಾನದಡಿ ರಸ್ತೆ ಅಭಿವೃದ್ಧಿ ಹಾಗೂ ವಿವಿಧ ಕಾಮಗಾರಿಗಳಿಗೆ ಕ್ಷೇತ್ರದಾದ್ಯಂತ ಚಾಲನೆ ದೊರೆಯಲಿದೆ. ಮಾರ್ಚ್ ತಿಂಗಳ ಒಳಗೆ ಅನುದಾನ ಸಮರ್ಪಕವಾಗಿ ಉಪಯೋಗಿಸಿ ಅಭಿವೃದ್ಧಿ ಕಾರ್ಯಗಳನ್ನು ಲೋಕಾರ್ಪಣೆಗೊಳಿಸಲಿದ್ದೇವೆ ಎಂದರು.

ಇನ್ನು ಇದೇ ವೇಳೆ ಮಾತನಾಡಿದ ಸ್ಥಳೀಯರಾದ ವೆಂಕಪ್ಪ ಚೌಟ ಅವರು, ಹೆಸರಿಗೆ ಡಾಮರು ಹಾಕಿದ್ದರು, ಎಲ್ಲಾ ಕಿತ್ತು ಹೋಗಿತ್ತು. ಆ ಬಳಿಕ ಪ್ರದೇಶದ ಜನ ಬಹಳ ಕಷ್ಟಪಟ್ಟಿದ್ದೇವೆ. ಸ್ಥಳೀಯಾಡಳಿತಕ್ಕೆ ಮನವಿ ಮಾಡಿ ಸಾಕಾಗಿ ಹೋಗಿ ಕೊನೆಗೆ ನಾವೇ ಮಣ್ಣು ಹಾಕಿ ತಾತ್ಕಾಲಿಕ ರಸ್ತೆಯನ್ನು ಮಾಡಿದೆವು. ಇದೀಗ ಸಂಸದರು ಶಾಶ್ವತ ರಸ್ತೆಯನ್ನು ಒದಗಿಸಿಕೊಟ್ಟಿರುವುದು ಪಟ್ಟ ಶ್ರಮಕ್ಕೆ ಸಾರ್ಥಕತೆ ಒದಗಿಬಂದಿದೆ ಎಂದು ಹೇಳಿದರು.

ಈ ವೇಳೆ ಜಿ.ಪಂ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಹೇಮಂತ್ ಶೆಟ್ಟಿ ದೇರಳಕಟ್ಟೆ, ರಾಜೇಶ್ ಗಟ್ಟಿ, ವೆಂಕಪ್ಪ ಚೌಟ, ದೇವದಾಸ್ ಕಾಯಂಗಳ, ರಜನೀಶ್ ಪಂಡಿತ್ ಹೌಸ್ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *