Header Ads
Header Ads
Header Ads
Breaking News

ಪೆರ್ಮುದೆ ಮೋಹನ್ ಕುಮಾರ್ ಅವರ ಏಕವ್ಯಕ್ತಿ ಕಲಾ ಪ್ರದರ್ಶನ ಉಡುಪಿಯಲ್ಲಿ ಅ.14ರಂದು ಕಲಾ ಪ್ರದರ್ಶನ ಆರ್ಟಿಸ್ಟ್ ಫೋರಂನ ಕಾರ್ಯದರ್ಶಿ ಸಕು ಪಾಂಗಾಳ ಹೇಳಿಕೆ

ರಜತ ವರ್ಷದ ಸಂಭ್ರಮ ಪ್ರಯುಕ್ತ ಉಡುಪಿಯ ಆರ್ಟಿಸ್ಟ್ ಫೋರಂ ವತಿಯಿಂದ ದೃಷ್ಟಿ ಗ್ಯಾಲರಿಯಲ್ಲಿ ಖ್ಯಾತ ಚಿತ್ರಕಲಾವಿದ ಪೆರ್ಮುದೆ ಮೋಹನ್ ಕುಮಾರ್ ಅವರ ಏಕವ್ಯಕ್ತಿ ಕಲಾ ಪ್ರದರ್ಶನ ಅಕ್ಟೋಬರ್ 14 ರಂದು ಉದ್ಘಾಟನೆಗೊಳ್ಳಲಿದೆ ಅಕ್ಟೋಬರ್ ಹದಿನೇಳು ದವರೆಗೆ ಈ ಪ್ರದರ್ಶನ ನಡೆಯಲಿದೆ ಎಂದು ಆರ್ಟಿಸ್ಟ್ ಫೋರಂನ ಕಾರ್ಯದರ್ಶಿ ಸಕು ಪಾಂಗಾಳ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಈ ಕುರಿತು ಮಾತನಾಡಿದ ಅವ್ರು, ಜಲವರ್ಣ ಚಿತ್ರ ರಚನೆ ಸುಂದರ ಪ್ರಕೃತಿ ಚಿತ್ರ ಬಿಡಿಸುವುದರಲ್ಲಿ ಹೆಸರು ಮಾಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಮೂಲದ ಪೆರ್ಮುದೆ ಮೋಹನ್ ಕುಮಾರ್ ಅವರು ಕರಾವಳಿಯ ಪ್ರಕೃತಿ ಸೌಂದರ್ಯವನ್ನು ತೆರೆದಿಡಲಿದ್ದಾರೆ.

ವರ್ಣ ಸಿಂಚನ ಶೀರ್ಷಿಕೆಯಡಿ ಕಲಾ ಪ್ರದರ್ಶನ ನಡೆಯಲಿದ್ದು ಅಕ್ಟೋಬರ್ ಹದಿನಾಲ್ಕು ರ ಸಂಜೆ ನಾಲ್ಕು ಮೂವತ್ತಕ್ಕೆ ಕಲಾವಿದ ಗುರುರಾಜ್ ಮಾರ್ಪಳ್ಳಿ ಉದ್ಘಾಟಿಸಲಿದ್ದಾರೆ. ಅಕ್ಟೋಬರ್ ಹದಿನೇಳು ರವರೆಗೆ ಬೆಳಿಗ್ಗೆ ಹತ್ತರಿಂದ ಸಂಜೆ ಏಳು ಗಂಟೆಯವರೆಗೆ ಕಲಾ ಪ್ರದರ್ಶನ ನಡೆಯಲಿದೆ

Related posts

Leave a Reply