Breaking News

ಪೆಸಿಫಿಕ್‌ನಲ್ಲಿ ಆಮೆರಿಕದ ಹಡಗು ಬಡಿತ, ಯು‌ಎಸ್‌ಎಯ ಏಳು ನಾವಿಕರು ನಾಪತ್ತೆ

ಫೆಸಿಪಿಕ್ ಸಮುದ್ರದಲ್ಲಿ ಸರಕು ಸಾಗಣೆ ಹಡಗಿಗೆ ಅಮೆರಿಕದ ನೌಕಾ ಪಡೆಯ ಹಡಗು ಡಿಕ್ಕಿ ಹೊಡೆದಿದ್ದು, ಏಳು ಅಮೆರಿಕ ನಾವಿಕರು ಕಣ್ಮರೆಯಾಗಿದ್ದಾರೆ. ನಾವಿಕರ ಪತ್ತೆಗೆ ಜಪಾನ್ ಮತ್ತು ಅಮೆರಿಕ ಜಂಟಿಯಾಗಿ ಶೋಧ ಕಾರ್ಯಾಚರಣೆ ಆರಂಭಿಸಿವೆ.
ಕಣ್ಮರೆಯಾಗಿರುವ ನಾವಿಕರ ಪತ್ತೆಗೆ ವಿಮಾನ, ದೋಣಿ ಮತ್ತು ಹೆಲಿಕಾಪ್ಟರ್ಗಳನ್ನು ಬಳಸಲಾಗುತ್ತಿದೆ. ಅಮೆರಿಕದ ನೌಕೆಯಲ್ಲಿದ್ದ ಹಲವು ಸಿಬ್ಬಂದಿ ಗಾಯಗೊಂಡಿದ್ದಾರೆ. ಅವರನ್ನು ವಿಮಾನದ ಮೂಲಕ ತೆರವುಗೊಳಿಸಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಕಮಾಂಡಿಂಗ್ ಆಫೀಸರ್ ಒಬ್ಬರು ಸೇರಿದ್ದಾರೆ.

Related posts

Leave a Reply