Header Ads
Header Ads
Breaking News

ಪೇಜಾವರ ಶ್ರೀಗಳ ಭೇಟಿಯಾದ ಮುಸ್ಲಿಂ ಬಾಂಧವರು

 ಕಳೆದ ಬಾರಿ ಕೃಷ್ಣ ಮಠದಲ್ಲಿ ರಂಜಾನ್ ಇಪ್ತಾರ್ ಕೂಟ ನಡೆಸಿದ್ದ ಪೇಜಾವರ ಶ್ರೀಗಳು ಈ ಮೂಲಕ ವಿವಾದದ ಕೇಂದ್ರಬಿಂದು ಆಗಿದ್ದರು.ಆದ್ರೆ ಈ ವರ್ಷ ಮಾತ್ರ ಹಲವು ಹಿಂದೂ ಸಂಘಟನೆಗಳ ಒತ್ತಡ, ಮುಸ್ಲೀಂ ಬಾಂಧವರ ನಿರಾಸಕ್ತಿಯ ಹಿನ್ನಲೆಯಲ್ಲಿ ಇಪ್ತಾರ್ ಕೂಟವನ್ನು ನಡೆಸಲು ಪೇಜಾವರ ಶ್ರೀಗಳು ಮುಂದೆ ಬರಲಿಲ್ಲ.ಆದ್ರೆ ರಂಝಾನ್ ಹಬ್ಬದ ಹಿನ್ನಲೆಯಲ್ಲಿ ಪೇಜಾವರ ಮಠದಲ್ಲಿ ಪೇಜಾವರ ಶ್ರೀಗಳನ್ನು ಭೇಟಿ ಮಾಡಿರುವ ಮುಸ್ಲೀಂ ಮುಖಂಡರು ಪೇಜಾವರ ಶ್ರೀಗಳಿಗೆ ಹಣ್ಣು ಹಂಪಲು ನೀಡಿದರು.

 

ಈ ಸಂದರ್ಭ ಪೇಜಾವರ ಶ್ರೀಗಳು ಕೂಡಾ ಮುಸ್ಲೀಂ ಸಮುದಾಯಕ್ಕೆ ರಂಜಾನ್ ಶುಭಾಶಯ ಕೋರಿದರು. ಈ ಬಾರಿ ಇಫ಼ಾರ್ ಮಾಡದೇ ಇರುವ ಬಗ್ಗೆ ಪ್ರತಿಕ್ರಿಯಿಸಿದ ಪೇಜಾವರ ಶ್ರೀ ಇಫ್ತಾರ್ ಕೂಟವೇ ಆಗಬೇಕಿಲ್ಲ, ಸ್ನೇಹ ಕೂಟ ಯಾವಾಗ ಬೇಕಾದರೂ ಮಾಡಬಹುದು .ಉತ್ತರ ಭಾರತ ಪ್ರವಾಸದಲ್ಲಿದ್ದರಿಂದ ಈ ಭಾರೀ ಅವಕಾಶ ಸಿಕ್ಕಿಲ್ಲ. ಬೇರೆ ಕಾರ್ಯಕ್ರಮಗಳೆಲ್ಲಾ ಫಿಕ್ಸ್ ಆಗಿತ್ತು. ಹೀಗಾಗಿ ರಂಜಾನ್ ಸಮಯದಲ್ಲಿ ಸ್ನೇಹ ಕೂಟ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಮಾಡುತ್ತೇವೆ ಎಂದರು.

Related posts

Leave a Reply