Header Ads
Breaking News

ಪೊಲೀಸರ ಮುಂದೆ ಶರಣಾದ ಮಂಗಳೂರು ಬಾಂಬ್ ಪ್ರಕರಣದ ಆರೋಪಿ

ಮಂಗಳೂರು: ರಾಜ್ಯದಾದ್ಯಂತ ಭೀತಿ ಸೃಷ್ಟಿಗೆ ಕಾರಣವಾಗಿದ್ದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಆರೋಪಿ ಪೆÇಲೀಸರ ಮುಂದೆ ಶರಣಾಗಿದ್ದಾನೆ. ಡಿಜಿ. ಐಜಿಪಿ ನೀಲಮಣಿ ರಾಜು ಮುಂದೆ ಆರೋಪಿ ಆದಿತ್ಯ ರಾವ್ ಇಂದು ಮುಂಜಾನೆ ಶರಣಾಗಿದ್ದಾನೆ.

ಸೋಮವಾರ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿತ್ತು. ಇದಾದ ಬಳಿಕ ಇಂಡಿಗೋ ವಿಮಾನದಲ್ಲಿ ಬಾಂಬ್ ಇದೆ ಎಂಬ ಬೆದರಿಕೆ ಕರೆಯೂ ಬಂದಿತ್ತು. ಈ ಘಟನೆಯಿಂದ ರಾಜ್ಯಾದ್ಯಂತ ಭಯದ ವಾತಾವರಣ ಸೃಷ್ಟಿಯಾಗಿತ್ತು. ಬಾಂಬ್ ಪತ್ತೆ ಹಚ್ಚಿದ ಬಳಿಕ ಭದ್ರತಾ ಪಡೆ ಹಾಗೂ ಬಾಂಬ್ ನಿಷ್ಕ್ರಿಯ ದಳ ಅಧಿಕಾರಿಗಳು ಸುರಕ್ಷತಾ ವಿಧಾನಗಳನ್ನು ಬಳಸಿಕೊಂಡು ಕೆಂಜಾರು ಮೈದಾನದಲ್ಲಿ ಸ್ಫೋಟಗೊಳಿಸುವ ಮೂಲಕ ನಾಶ ಮಾಡಿದ್ದರು. ಇದಾದ ಬಳಿಕ ಮಂಗಳೂರು ಪೆÇಲೀಸರು ಶಂಕಿತ ಆರೋಪಿಯ ಫೆÇೀಟೋವನ್ನು ಬಿಡುಗಡೆ ಮಾಡಿದ್ದರು. ಮಂಗಳವಾರ ಆದಿತ್ಯ ರಾವ್ ಶಂಕಿತ ಆರೋಪಿ ಎಂಬ ಮಾಹಿತಿ ಪೆÇಲೀಸರಿಗೆ ಲಭ್ಯವಾಗಿತ್ತು. ಇದರ ಆಧಾರದಲ್ಲಿ ಮೂರು ತಂಡಗಳು ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದವು.

ಇದೀಗ ಆರೋಪಿ ಆದಿತ್ಯರಾವ್ ಬೆಂಗಳೂರಿನಲ್ಲಿ ಡಿಜಿ ಐಜಿಪಿ ನೀಲಮಣಿ ಎನ್ ರಾಜು ಅವರ ಮುಂದೆ ಶರಣಾಗಿದ್ದಾನೆ. ಆದಿತ್ಯ ರಾವ್ ವಿರುದ್ಧ ಈ ಹಿಂದೆ ಬೆಂಗಳೂರು ವಿಮಾನ ನಿಲ್ದಾಣ ಹಾಗೂ ರೈಲ್ವೇ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ ಹಾಕಿದ ಆರೋಪವಿದೆ. ಈ ಆರೋಪದಡಿಯಲ್ಲಿ ಬಂದನಕ್ಕೊಳಗಾಗಿ ಒಂದು ವರ್ಷ ಜೈಲು ಸೇರಿದ್ದ.

Related posts

Leave a Reply

Your email address will not be published. Required fields are marked *