

ಪುತ್ತೂರು: ಪುತ್ತೂರು: ಪುತ್ತೂರಿನ ಪೊಳ್ಯದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸಂಘಪರಿವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗ್ರಾಮವಿಕಾಸ ಮಂಗಳೂರು ವಿಭಾಗ ಪ್ರಮುಖ್ ಆಗಿರುವ ಬಂಟ್ವಾಳ ಅಗರ್ತಬೈಲು ನಿವಾಸಿ ವೆಂಕಟ್ರಮಣ ಹೊಳ್ಳ ಮ್ರತಪಟ್ಟಿದ್ದಾರೆ.
ಅವರು ಪುತ್ತೂರು ಪೊಲೀಸ್ ವಸತಿ ನಿಲಯಗಳ ಬಳಿಯ ಪಂಚವಟಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರದಲ್ಲಿ ರಾತ್ರಿ ತಂಗಿದ್ದು ಡಿ.15 ರ ನಸುಕಿನ ಜಾವ 5 ಗಂಟೆಯ ಸುಮಾರಿಗೆ ಬಂಟ್ವಾಳದ ಮೆನೆಗೆ ಬೈಕ್ ನಲ್ಲಿ ತೆರಳುವ ವೇಳೆ ಪೋಳ್ಯ ಸಮೀಪದ ಪೊಲೀಸ್ ಬ್ಯಾರಿಕೇಡ್ ಬಳಿ ಈ ಅಪಘಾತ ಸಂಭವಿಸಿದೆ. ಅಪಘಾತ ಸ್ಥಳದಲ್ಲಿ ಬ್ಯಾರಿಕೇಡ್ ಮತ್ತು ಬೈಕ್ ಗೆ ಹಾನಿಯಾಗಿದೆ. ವೆಂಕಟ್ರಮಣ ಹೊಳ್ಳ ಅವರ ಮ್ರತ ದೇಹ ಘಟನೆಯ ತುಸು ದೂರ ಬಿದ್ದಿದ್ದು ಅವರ ತಲೆ ಜಜ್ಜಿ ಹೋಗಿದೆ. ವೆಂಕಟ್ರಮಣ ಹೊಳ್ಳ ಅವರು ಚಲಾಯಿಸುತ್ತಿದ್ದ ಬೈಕ್ ಗೆ ಬೇರೆ ಯಾವುದೋ ವಾಹನ ಡಿಕ್ಕಿಯಾಗಿ ಹೋಗಿರಬಹುದೇ ಎಂಬ ಶಂಕೆಯು ವ್ಯಕ್ತವಾಗುತ್ತಿದೆ.ಪುತ್ತೂರು ನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.