Header Ads
Breaking News

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ : ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ವತಿಯಿಂದ ಪ್ರತಿಭಟನೆ

ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಮಂಗಳೂರು ಇದ್ರ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ ಕುದ್ರೋಳಿ ಚಲೋ ಕಾರ್ಯಕ್ರಮ ಮಂಗಳೂರಿನ ಕುದ್ರೋಳಿ ಟಿಪ್ಪು ಸುಲ್ತಾನ್ ಗಾರ್ಡನ್ ಮೈದಾನದಲ್ಲಿ ನಡೆಯಿತು….ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪತ್ರಕರ್ತರ ರಾ .ಚಿಂತನ್ ಪ್ರತೀ ಒಬ್ಬರ ಮನೆಯಲ್ಲಿ ಸೈನಿಕ, ಐಎಎಸ್, ಐಪಿಎಸ್, ವಕೀಲರನ್ನು ನಾವು ತಯಾರಿಸಬೇಕು ಇನ್ನೂ ಮುಂದಿನ ದಿನಗಳಲ್ಲಿ ಮೃತ ಜಲೀಲ್ ಪುತ್ರಿಯನ್ನು ಈ ನಗರದ ಪೊಲೀಸ್ ಆಯುಕ್ತರನ್ನಾಗಿಸಲು ಸಪತ ಮಾಡಬೇಕು ನಾನು ಬರೆದ ಪುಸ್ತಕ ಅರ್ಧ ಭಾಗವನ್ನು ಇದಕ್ಕಾಗಿ ನಾನಿಟ್ಟಿದ್ದೇನೆ ನೀವೂ ಈಗಲೇ ಸಪತ ಮಾಡಬೇಕೆಂದು ಅವರು ಹೇಳಿದರು.ಬಿ.ಆರ್ ಬಾಸ್ಕರ್ ಪ್ರಸಾದ್ ಬೆಂಗಳೂರು ಮಾತನಾಡಿ ಭಾರತದಲ್ಲಿ ಆರ್.ಎಸ್.ಎಸ್ ಹಾಗೂ ಬಿಜೆಪಿಯನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಬೇಕು, ಅಮಾಯಕರ ಮೇಲೆ ಹಲ್ಲೆಯು ನಡೆಯತ್ತದೆ ಇದರ ವಿರುದ್ದ ಸತತ ಹೋರಾಟ ಮಾಡಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಕೆ. ಅಶ್ರಫ್, , ಎಚ್ ಐ ಸುಫ್ಯಾನ್ ಸಖಾಫಿ ಕಾವಳಕಟ್ಟೆ , ಎ.ಕೆ ಕುಕ್ಕಿಲ, ರಫಿವುದ್ದೀನ್ ಕುದ್ರೋಳಿ, ಇಲ್ಯಾಸ್ ತುಂಬೆ, ಎಂ.ಜಿ ಮಹಮ್ಮದ್ ಮಂಗಳೂರು, ಶಾಹಿದ ತಸ್ಲೀಮ್, ಮುನೀಬ್ ಬೆಂಗರೆ ಮತ್ತಿತರರು ಉಪಸ್ಥಿತರಿದ್ದರು…

Related posts

Leave a Reply

Your email address will not be published. Required fields are marked *