Header Ads
Header Ads
Header Ads
Header Ads
Header Ads
Header Ads
Breaking News

ಆರೋಗ್ಯ ಸಚಿವ ಶ್ರೀರಾಮಲು ಅವರಿಂದ ಪ್ಯಾಮಿಲಿ ಟ್ರಸ್ಟ್ ಹೆಲ್ತ್ ಕಾರ್ಡ್ ವಿತರಣೆ

 ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿ, ಮೊಗವೀರ ಯುವ ಸಂಘಟನೆ ಮತ್ತು ಮಾಹೆಯ ಸಹಯೋಗದಲ್ಲಿ ನೀಡಲಾಗುವ ಆರೋಗ್ಯ ಕಾರ್ಡ್‌ಗಳ ವಿತರಣಾ ಸಮಾರಂಭ ಶ್ಯಾಮಿಲಿ ಸಭಾಂಗಣದಲ್ಲಿ ನಡೆಯಿತು. ಆರೋಗ್ಯ ಕಾರ್ಡ್‌ಗಳ ವಿತರಣಾ ಸಮಾರಂಭವನ್ನು ಆರೋಗ್ಯ ಸಚಿವ ಶ್ರೀರಾಮಲು ಉದ್ಘಾಟಿಸಿದರು. ಬಳಿಕ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಕಾರ್ಡ್‌ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಆರೋಗ್ಯದ ದೃಷ್ಟಿಯಿಂದ ಬಡ ಜನರಿಗೆ ಲಾಭವಾಗುವ ನಿಟ್ಟಿನಲ್ಲಿ ಜಿ.ಶಂಕರ್ ಮತ್ತು ಅವರ ಟ್ರಸ್ಟ್ ಉತ್ತಮವಾದ ಕೆಲಸ ಮಾಡುತ್ತಿದೆ. ಕರಾವಳಿ ಮಾತ್ರವಲ್ಲದೇ ರಾಜ್ಯದ ಉದ್ದಗಲಕ್ಕೂ ಇಂತಹ ಕಾರ್ಡ್ ಗಳು ವಿಸ್ತರಣೆ ಆಗಬೇಕು.ಸರಕಾರ ಕೂಡಾ ಬಡವರಿಗೆ ಅನುಕೂಲದ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು. ಟ್ರಸ್ಟ್ ನ ಪ್ರವರ್ತಕ ನಾಡೋಜ ಡಾ. ಜಿ ಶಂಕರ್ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಸಮಾರಂಭದಲ್ಲಿ ಅತೀ ಹೆಚ್ಚು ರಕ್ತದಾನ ಮಾಡಿದ ಚಂದ್ರೇಶ್ ಪಿತ್ರೋಡಿ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅದ್ಯಕ್ಷತೆಯನ್ನು ಶಾಸಕ ರಘುಪತಿಭಟ್ ವಹಿಸಿದ್ದರು. ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಲ್ , ಮೊಗವೀರ ಯುವ ಸಂಘ್ಟನೆಯ ಅದ್ಯಕ್ಷ ವಿನಯ್ ಕರ್ಕೇರ ಉಪಸ್ಥಿತರಿದ್ದರು. 

 

Related posts

Leave a Reply

Your email address will not be published. Required fields are marked *