Header Ads
Breaking News

ಪ್ರಕೃತಿ ಖರೀದಿಸಲಾಗದ ಅಮೂಲ್ಯ ಸಂಪತ್ತು : ಕಾಪು ವಲಯ ಉಪ ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ ಹೇಳಿಕೆ

ಪ್ರಕೃತಿ ಖರೀದಿಸಲಾಗದ ಅಮೂಲ್ಯ ಸಂಪತ್ತು. ನಾವು ಆಸ್ವಾದಿಸುವ ಪ್ರಕೃತಿ ಸಂಪತ್ತು ನಮ್ಮ ಮುಂದಿನ ಪೀಳಿಗೆಯವರೆಗೂ ಉಳಿಯಬೇಕಾದರೆ, ಪ್ರಕೃತಿಗಾಗಿ ನಾವು ಶಾಶ್ವತ ಕೊಡುಗೆಯನ್ನು ನೀಡಬೇಕಿದೆ ಎಂದು ಕಾಪು ವಲಯ ಉಪ ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ ಹೇಳಿದರು. ಅವರು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಅರಣ್ಯ ಇಲಾಖೆಯ ಜಂಟಿ ಸಹಯೋಗದಲ್ಲಿ ಕಾಪು ಪ್ರೆಸ್ ಕ್ಲಬ್‌ನ ಆವರಣದಲ್ಲಿ ಆಯೋಜಿಸಲಾಗಿದ್ದ ವನ ಮಹೋತ್ಸವ ಮತ್ತು ಗಿಡ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅರಣ್ಯ ರಕ್ಷಕರಾದ ಮಂಜುನಾಥ ನಾಯ್ಕ್, ಅಭಿಲಾಷ್ ಎಸ್.ಬಿ., ಕಾಪು ಬಿಕ್ಕೋ ಕಂಪೆನಿಯ ಪ್ರಬಂಧಕ ವಿಶ್ವನಾಥ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿನಿಧಿ ಪುಂಡಲೀಕ ಮರಾಠೆ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಮೋದ್ ಸುವರ್ಣ, ಕಾರ್ಯದರ್ಶಿ ವಾದಿರಾಜ ರಾವ್, ಕೋಶಾಧಿಕಾರಿ ಬಾಲಕೃಷ್ಣ ಪೂಜಾರಿ ಹಾಗೂ ಪದಾಧಿಕಾರಿಗಳು ಮತ್ತು ಬಿಕ್ಕೋ ಕಂಪೆನಿಯ ಸಿಬಂದಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *