Header Ads
Header Ads
Header Ads
Breaking News

ಪ್ರತಿಯೊಬ್ಬ ದಿವ್ಯಾಂಗರಲ್ಲಿಯೂ ಕೌಶಲ್ಯತೆ ಇರುತ್ತದೆ ಅಂತವರನ್ನು ಗುರುತಿಸುವ ಕಾರ್ಯ ಸಮಾಜದಿಂದ ಆಗಬೇಕು : ಪುಟ್ಟರಾಜು ಹೇಳಿಕೆ

ಕಾರ್ಕಳ: ದಿವ್ಯಾಂಗ ಚೇತನ ವ್ಯಕ್ತಿಗಳಲ್ಲಿಯೂ ಇತರರಂತೆ ಸಾಧನೆ ಮಾಡುವ ಶಕ್ತಿ ಇದೆ. ದೇಶದಲ್ಲಿ ಅತ್ಯುನ್ನತ್ತ ಹುದ್ದೆಗಳನ್ನು ಅವರೇ ನಿಭಾಯಿಸುತ್ತಿರುವ ದಾಖಲೆ ಇದೆ. ಪ್ರತಿಯೊಬ್ಬರಲ್ಲಿಯೂ ಕೌಶ್ಯಲತೆ ಇರುತ್ತದೆ. ಅಂತಹವರನ್ನು ಪ್ರೋತ್ಸಾಹಿ, ಗುರುತಿಸುವ ಕಾರ್ಯವು ಸಮಾಜದಿಂದ ನಡೆಯಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಹೇಳಿದರು.

ತಾಲೂಕು ಕಾನೂನು ಸೇವಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ ಕಾರ್ಕಳ, ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಾರ್ಕಳ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಲಾಖೆ ಕಾರ್ಕಳ, ವಿಜೇತಾ ವಿಶೇಷ ಶಾಲೆ ಪರಪ್ಪು ಇದರ ಜಂಟೀ ಆಶ್ರಯದಲ್ಲಿ ಕುಕ್ಕುಂದೂರು ನಕ್ರೆ ಪರಪ್ಪು ವಿಜೇತಾ ವಿಶೇಷ ಶಾಲೆಯಲ್ಲಿ ಆಯೋಜಿಸಿದ ವಿಕಲಚೇತನರ ದಿನಾಚರಣೆಯನ್ನು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕಾರ್ಕಳ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸನತ್‌ಕುಮಾರ್ ಜೈನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಹಿಂದಿನ ದಿನಗಳಲ್ಲಿ ದಿವ್ಯಾಂಗ ಚೇತನರನ್ನು ಮುಖ್ಯ ವಾಹಿನಿಗೆ ತರಲು ವ್ಯವಸ್ಥೆಗಳು ಇರಲಿಲ್ಲ. ಪ್ರಸಕ್ತ ಕಾಲಘಟ್ಟದಲ್ಲಿ ಸರಕಾರವೇ ಹೊಸ, ಹೊಸ ಯೋಜನೆಗಳು, ಸವಲತ್ತು ಜಾರಿಗೆ ತಂದಿದ್ದು, ಆ ಮೂಲಕ ದಿವ್ಯಾಂಗ ಚೇತನರನ್ನು ಮುಖ್ಯ ವಾಹಿನಿ ತರಲು ಸಾಧ್ಯವೆಂದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಚಂದ್ರ ನಾಯಕ್, ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ವಕೀಲ ಸೂರಜ್ ಜೈನ್, ವಿಜೇತಾ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯಿ ಡಾ. ಕಾಂತಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *