Header Ads
Breaking News

ಪ್ರಧಾನಿ ಮೋದಿ ಆಡಳಿತದ ಸಾಧನೆಗಳು ಜನರನ್ನು ತಲುಪಿದೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿಕೆ

ದೇಶದ ಪ್ರಧಾನಿ ನರೇಂದ್ರ ಮೋದಿ ಆಡಳಿತದ ಸಾಧನೆಗಳು ಜನರನ್ನು ತಲುಪಿದೆ. ರಾಷ್ಟ್ರದಲ್ಲಿ ಬಿಜೆಪಿ ಪರವಾದ ಅಲೆಯಿದೆ. ಕೋವಿಡ್ ನಿರ್ವಹಣೆಯ ಸಫಲತೆ ಚುನಾವಣಾ ಫಲಿತಾಂಶದಲ್ಲಿ ಕಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಪರಿಷತ್ ಚುನಾವಣೆಯಲ್ಲೂ 3 ಸ್ಥಾನ ಬಿಜೆಪಿ ಪಡೆದಿದೆ. ನಾಲ್ಕರಲ್ಲಿ ನಾಲ್ಕೂ ಸ್ಥಾನ ಗೆಲ್ಲುವ ವಿಶ್ವಾಸವಿದೆ. ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಯಡಿಯೂರಪ್ಪವನರಿಗೆ ಸವಾಲುಗಳು ಎದುರಾದವು. ಎಲ್ಲವನ್ನೂ ಯಶಸ್ವಿಯಾಗಿ ಬಿಎಸ್‍ವೈ ನಿರ್ವಹಿಸಿದ್ದಾರೆ. ರಾಜ್ಯದ ರಕ್ಷಣೆ ಬಿಎಸ್‍ವೈರಿಂದ ಸಾಧ್ಯ ಅಂತ ಜನ ಕಂಡಿದ್ದಾರೆ.
ಶಿರಾ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಭಧ್ರಕೋಟೆಯನ್ನು ಯಡಿಯೂರಪ್ಪ ಒಡೆದಿದ್ದಾರೆ. ವಿಪಕ್ಷಗಳ ಆರೋಪಗಳೆಲ್ಲಾ ಸುಳ್ಳು ಅಂತಾ ಸಾಬೀತಾಗಿದೆ. ಕಾಂಗ್ರೆಸ್‍ನ ಕಪಟ ನಾಟಕ ಅಂತಾ ಜನರಿಗೆ ಗೊತ್ತಾಗಿದೆ ಎಂದು ಮಂಗಳೂರಿನಲ್ಲಿ ನಳಿನ್ ಕುಮಾರ್ ಕಟೀಲ್ ಹೇಳಿದರು.

Related posts

Leave a Reply

Your email address will not be published. Required fields are marked *