Header Ads
Header Ads
Header Ads
Header Ads
Header Ads
Header Ads
Breaking News

ಪ್ರವಾಹ ಸಂತ್ರಸ್ತರಿಗೆ ನೆರವಾಗುವ ಹಿನ್ನೆಲೆ : ಕಾರ್ಕಳ ಶಾಸಕ ಸುನೀಲ್ ಕುಮಾರ್ ನೇತೃತ್ವದಲ್ಲಿ ಧನಸಂಗ್ರಹ

ಉತ್ತರ ಕನ್ನಡದಲ್ಲಿ ಭೀಕರ ಪ್ರವಾಹಕ್ಕೆ ಪ್ರವಾಹಕ್ಕೆ ಬಲಿಯಾದ ಕುಟುಂಬದ ಸಂತ್ರಸ್ತರಿಗೆ ಹಾಗೂ ಆಸ್ತಿಪಾಸ್ತಿ ಕಳಕೊಂಡವರಿಗೆ ನೆರವಾಗುವ ಉದ್ದೇಶದಿಂದ ಕಾರ್ಕಳ ಶಾಸಕ ಸುನೀಲ್ ಕುಮಾರ್ ನೇತೃತ್ವದಲ್ಲಿ ಧನಸಂಗ್ರಹ ಅಭಿಯಾನ ಕಾರ್ಕಳದಲ್ಲಿ ನಡೆಯಿತು. ಕಾರ್ಕಳದ ಅನಂತಶಯನ ವೃತ್ತದಿಂದ ಶ್ರೀ ವೆಂಕಟರಮಣ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸಿ ಧನಸಹಾಯವನ್ನು ಸಂಗ್ರಹಿಸಿದರು. ಜೊತೆಗೆ ಅಗತ್ಯ ವಸ್ತುಗಳನ್ನು ಕೂಡ ಸಂಗ್ರಹಿಸಿದರು. ಸಂದರ್ಭದಲ್ಲಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರವೀಂದ್ರಕುಮಾರ್, ಅಧ್ಯಕ್ಷರಾದ ಅನಂತಕೃಷ್ಣ, ನವೀನ್ ನಾಯಕ್, ಬಿಜೆಪಿ ವಕ್ತಾರ ಹರೀಶ್ ಪುರಸಭಾ ಸದಸ್ಯರಾದ ಪೂರ್ಣಿಮಾ, ಸುಮ ಕೇಶವ, ನೀತಾ ಆಚಾರ್ಯ, ಮಾಜಿ ಪುರಸಭಾ ಸದಸ್ಯ ಪ್ರಕಾಶ್ ರಾವ್ ಮುಂತಾದವರು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *