Header Ads
Header Ads
Header Ads
Header Ads
Header Ads
Header Ads
Breaking News

ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ ಜಸ್ಟೀಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆ

ಭೀಕರ ಪ್ರವಾಹದಿಂದ ಕರ್ನಾಟಕ ಸಹಿತ ಅನೇಕ ರಾಜ್ಯಗಳು ತತ್ತರಿಸಿವೆ. ಅನೇಕ ಮಂದಿ ಮನೆ, ಮಠಗಳನ್ನು ಕಳೆದುಕೊಂಡು ಪರಿಹಾರ ಕೇಂದ್ರಗಳಲ್ಲಿ ಆಶ್ರಯವನ್ನು ಪಡೆದಿದ್ದಾರೆ. ಸಂತ್ರಸ್ತರಿಗೆ ರಾಜ್ಯದ ನಾನಾ ಭಾಗಗಳಿಂದ ನೆರವಿನ ಮಹಾಪೂರ ಹರಿದುಬರ್ತಾ ಇದ್ದು, ವಿವಿಧ ಸಂಘಸಂಸ್ಥೆಗಳು ನೆರವಿನ ಹಸ್ತ ಚಾಚುತ್ತಿದ್ದಾರೆ. ಈ ನಡುವೆ ಮಂಗಳೂರಿನ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಕಂಡು ಕೇಳರಿಯದಂತಹ ಪ್ರವಾಹಕ್ಕೆ ಸಿಲುಕಿ ಕರುನಾಡು ನಲುಗಿದೆ. ಭೀಕರ ಪ್ರವಾಹದಿಂದಾಗಿ ಜನ ಜಾನುವಾರುಗಳು ತಮ್ಮ ಮನೆ ಮಠಗಳನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಪ್ರವಾಹ ಸಂತ್ರಸ್ತರ ನೆರವಿಗೆ ವಿವಿಧ ಸಂಘಸಂಸ್ಥೆಗಳು ನೆರವಿಗೆ ಧಾವಿಸಿವೆ. ಈ ಪೈಕಿ ಮಂಗಳೂರು ಹೊರವಲಯದ ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವತಿಯಿಂದ ನೆರೆಪೀಡಿತ ಪ್ರದೇಶಗಳಲ್ಲಿ ನೆರೆ ಪರಿಹಾರ ವೈದ್ಯಕೀಯ ಶಿಬಿರವನ್ನು ನಡೆಸಲಾಗಿದೆ.

 ಭೀಕರ ಪ್ರವಾಹಕ್ಕೆ ತುತ್ತಾದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮೀಪದ ಗಂಜಿ ಕೇಂದ್ರಗಳಲ್ಲಿ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವತಿಯಿಂದ ನೆರೆ ಪರಿಹಾರ ವೈದ್ಯಕೀಯ ಶಿಬಿರ ನಡೆಸಲಾಯಿತು. ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಕ್ಯಾಶ್ಯುವಾಲಿಟಿ ಮೆಡಿಕಲ್ ಆಫಿಸರ್ ಡಾ.ಸುದೇಶ್ ಶೆಟ್ಟಿ, ಐಸಿಯು ಇನ್‍ಚಾರ್ಜ್ ಡಾ. ನರೇಶ್ ರೈ ನೇತೃತ್ವದಲ್ಲಿ ವೈದ್ಯರ ತಂಡವು 5 ಗಂಜಿಕೇಂದ್ರಗಳಲ್ಲಿ ಸುಮಾರು 200ಕ್ಕೂ ಅಧಿಕ ಮಂದಿಯ ಆರೋಗ್ಯ ತಪಾಸಣೆ ನಡೆಸಿತು. ಚಿಕಿತ್ಸೆ ಅವಶ್ಯಕತೆ ಇರುವವರಿಗೆ ಸೂಕ್ತ ಔಷಧೋಪಚಾರಗಳನ್ನು ನೀಡಲಾಯಿತು. ಸಿದ್ಧರ, ಖಾರ್ಗೆ, ಕಿನ್ನಾರ, ಕದ್ರಾ, ಹೀಗೆ ಅನೇಕ ಕಡೆಗಳಲ್ಲಿ ತೆರೆಯಲಾಗಿದ್ದ ಗಂಜಿಕೇಂದ್ರಗಳಲ್ಲಿ ವೈದ್ಯಕೀಯ ಶಿಬಿರ ನಡೆಯಿತು. ಆಸ್ಪತ್ರೆಯ ಸಾಮಾಜಿಕ ಕಾಳಜಿಯು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

Related posts

Leave a Reply

Your email address will not be published. Required fields are marked *