Header Ads
Header Ads
Breaking News

ಪ್ರಸೂತಿ ತಜ್ಞರ ಮುಷ್ಕರ ’ವೈದ್ಯ ಧರ್ಮ’ಕ್ಕೆ ಅಪಚಾರ:ವೈದ್ಯರ ನಿರ್ಧಾರಕ್ಕೆ ಎಸ್.ಡಿ.ಪಿ.ಐ ಆಕ್ರೋಶ

ಪುತ್ತೂರು; ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭ ಮಹಿಳೆ ಸಾವಿಗೀಡಾದ ಪ್ರಕರಣದಲ್ಲಿ ನಡೆದ ಪ್ರತಿಭಟನೆಗೆ ವಿರುದ್ಧವಾಗಿ ಪುತ್ತೂರು ತಾಲೂಕಿನ ಪ್ರಸೂತಿ ತಜ್ಞರು ಶನಿವಾರ ಹಮ್ಮಿಕೊಂಡಿರುವ ಮುಷ್ಕರ ’ವೈದ್ಯಧರ್ಮ’ ಕ್ಕೆ ಅಪಚಾರವಾಗಿದೆ. ಇದರಿಂದ ರೋಗಿಗಳಿಗೆ ಅಪಾರ ತೊಂದರೆ ಉಂಟಾಗಲಿದೆ. ಈ ಮುಷ್ಕರ ವೈದ್ಯರ ತಪ್ಪು ಹೆಜ್ಜೆ ಎಂದು ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಹೇಳಿದರು.

ಪುತ್ತೂರಿನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ೧೩ ಪ್ರಕರಣಗಳಲ್ಲಿ ಅನಿರೀಕ್ಷಿತ ಸಾವುಗಳು ಸಂಭವಿಸಿವೆ. ಈ ಬಗ್ಗೆ ಹಲವಾರು ಬಾರಿ ಸಂಘಟನೆಯ ಮುಖಂಡರು ವೈದ್ಯರೊಂದಿಗೆ ಮಾತುಕತೆ ನಡೆಸಿದ್ದು, ಇನ್ನು ಇಂತಹ ತಪ್ಪು ನಡೆಯದಂತೆ ಎಚ್ಚರಿಕೆ ವಹಿಸುವುದಾಗಿ ವೈದ್ಯರು ಭರವಸೆ ನೀಡಿದ್ದರು. ಆದರೆ ಮತ್ತೆ ಅದೇ ತಪ್ಪು ಆಸ್ಪತ್ರೆಯ ವ್ಯವಸ್ಥೆಯಲ್ಲಿ ನಡೆದಿರುವ ಕಾರಣ ಪ್ರತಿಭಟನೆ ನಡೆಸಲಾಗಿದೆ ಎಂದವರು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಸದಸ್ಯ ಜಾಬೀರ್ ಅರಿಯಡ್ಕ, ಪುತ್ತೂರು ಸಮಿತಿ ಉಪಾಧ್ಯಕ್ಷ ಇಬ್ರಾಹಿಂ ಸಾಗರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಹಾಜಿ ಮೆಜೆಸ್ಟಿಕ್, ಜತೆ ಕಾರ್ಯದರ್ಶಿ ಅಶ್ರಫ್ ಬಾವಾ ಉಪಸ್ಥಿತರಿದ್ದರು.

Related posts

Leave a Reply