Header Ads
Header Ads
Breaking News

ಪ್ರಾಣ ಬಿಡುವವರೆಗೂ ಬಿಎಸ್‌ವೈ ಆಪರೇಷನ್ ಬಿಡಲ್ಲ ,ಬಿಎಸ್‌ವೈ ಅವರ ಹವ್ಯಾಸವೇ ಅದು : ಜನಾರ್ದನ ಪೂಜಾರಿ ಹೇಳಿಕೆ

 ಪ್ರಾಣ ಬಿಡುವವರೆಗೂ ಯಡಿಯೂರಪ್ಪ ಆಪರೇಷನ್ ಮಾಡೋದನ್ನು ಬಿಡಲಾರರು ಏಕೆಂದರೆ ಅವರ ಹವ್ಯಾಸವೇ ಅದು ಎಂದು ಮಾಜಿ ಕೇಂದ್ರ ಸಚಿವ,ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮಂಗಳೂರಿನಲ್ಲಿ ಬಿಎಸ್‌ವೈ ವಿರುದ್ಧ ಹರಿಹಾಯ್ದಿದ್ದಾರೆ. ಬಿಎಸ್‌ವೈ ತಕ್ಷಣ ಕ್ಷಮೆಯಾಚಿಸಲಿ, ಇದು ಅವರಿಗೆ ರಾಷ್ಟ್ರಮಟ್ಟದಲ್ಲಿ ಕೆಟ್ಟ ಹೆಸರು ತಂದಿದೆ ಎಂದರು. ಅಲ್ಲದೇ ಸದನದಲ್ಲಿ ಚರ್ಚೆ ನಡೆಸಿ ಜನರಿಗೆ ಸತ್ಯಾಂಶ ತಿಳಿಸುವ ನಿಟ್ಟಿನಲ್ಲಿ ಯಾವ ತನಿಖೆ ನಡೆದರೂ ಅಡ್ಡಿಯಾಗಬಾರದು ಎಂದರು. ಇನ್ನು ಶಾಸಕ ಪ್ರೀತಂ ಗೌಡ ಮಾಜಿ ಪ್ರಧಾನಿ ವಿರುದ್ಧ ನೀಡಿದ್ದ ಹೇಳಿಕೆಗೆ ಗರಂ ಆದ ಪೂಜಾರಿ, ಈ ರೀತಿ ಮಾತನ್ನು ದೇವರೂ ಮೆಚ್ಚಲಾರ. ನೀವು ಯಾವಾಗ ಹೋಗ್ತೀರಿ ಅನ್ನೋದು ನಿಮಗೆ ಗೊತ್ತುಂಟ ಎಂದು ಪೂಜಾರಿ ಪ್ರಶ್ನಿಸಿದರು. ಮಾಜಿ ಸಿಎಂ ಸಿದ್ಧರಾಮಯ್ಯ ಅವರ ವಿರುದ್ದ ಪೂಜಾರಿ ಮತ್ತೊಮ್ಮೆ ಕಿಡಿಕಾರಿದ್ದಾರೆ. ಅವ್ರೊಬ್ಬರು ಕಾಂಗ್ರೆಸ್‌ಗೆ ಶನಿ ಇದ್ದಾಂತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಅತೃಪ್ತ ಶಾಸಕರಿಗೆ ಸಿದ್ದರಾಮಯ್ಯ ಬೆಂಬಲ ನೀಡಿದ್ದಾರೆ ಎಂಬ ಆರೋಪಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

Related posts

Leave a Reply