Header Ads
Breaking News

ಪ್ರಾಧ್ಯಾಪಕ ಡಾ. ಸಿದ್ಧರಾಜು ಅವರ ‘ಕೊಳಲು’ ಕವನ ಸಂಕಲನ ಬಿಡುಗಡೆ

ಮಂಗಳೂರು : ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಸಿದ್ಧರಾಜು ರವರು ಕೊಳಲು ಎಂಬ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಮಂಗಳೂರಿನ ವಿಶ್ವವಿದ್ಯಾನಿಲಯದ ಕುಲಪತಿಗಳ ಕಛೇರಿಯಲ್ಲಿ ಸರಳವಾಗಿ ಆಯೋಜಿಸಲಾಗಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕುಲಪತಿಗಳಾದ ಪ್ರೊಫೆಸರ್ ಪಿ. ಎಸ್. ಎಡಪಡಿತ್ತಾಯರವರು ಡಾ. ಸಿದ್ಧರಾಜು ರವರ ಕೊಳಲು ಎಂಬ ಕವನ ಸಂಕಲನದ ಪುಸ್ತಕ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಸಿದ್ಧರಾಜು ರವರು ಕೊಳಲು ಎಂಬ ಕವನ ಸಂಕಲನದಲ್ಲಿ 77 ಕವಿತೆಗಳಿವೆ. ಪ್ರತಿಯೊಂದು ಕವಿತೆಗಳೂ ಒಂದಕ್ಕೊಂದು ವಿಭಿನ್ನವಾಗಿವೆ ಎಂದರು.

ಕವನ ಸಂಕಲನದ ಲೇಖಕರಾದ ಕವಿ ಹಾಗು ಸಸ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಡಾ. ಸಿದ್ಧರಾಜು ರವರು ಪುಸ್ತಕ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಪ್ರೊಫೆಸರ್ ಪ್ರಶಾಂತ ನಾಯಕ, ಸಹ ಪ್ರಾಧ್ಯಾಪಕರಾದ ಡಿ.ಪಿ. ಅಂಗಡಿ ಮತ್ತು ಡಾ. ಅನಿತ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *