Header Ads
Header Ads
Breaking News

ಪ್ರಾಯೋಗಿಕ ಪತ್ರಿಕೆಗಳು ಬರವಣಿಗೆಯ ಕೈಪಿಡಿ : ಪ್ರೊ. ಭಾಸ್ಕರ್ ಹೆಗಡೆ

ಉಜಿರೆ: ಪ್ರಾಯೋಗಿಕ ಪತ್ರಿಕೆಗಳು ವಿದ್ಯಾರ್ಥಿಗಳ ಬರವಣಿಗೆಯ ಹಾದಿಗೆ ಉತ್ತಮ ಅಡಿಪಾಯ ಒದಗಿಸುತ್ತಿದೆ. ವಿದ್ಯಾರ್ಥಿಗಳಲ್ಲಿನ ವಿನೂತನ ಯೋಚನೆಗಳು ಹಾಗೂ ಚಿಂತನೆಗಳಿಗೆ ಇದು ವೇದಿಕೆಯಾಗುತ್ತದೆ ಎಂದು ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಭಾಸ್ಕರ್ ಹೆಗಡೆ ಅಭಿಪ್ರಾಯಪಟ್ಟರು.

ಅವರು ಉಜಿರೆ ಎಸ್.ಡಿ.ಎಂ. ಕಾಲೇಜಿನ ಸಮ್ಯಗ್ದರ್ಶನ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮಾರ್ದನಿ ಪ್ರಾಯೋಗಿಕ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಅನೇಕ ವರ್ಷಗಳಿಂದ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಬರವಣಿಗೆಯ ಕುರಿತ ಆಸಕ್ತಿಯ ಪ್ರತೀಕವಾಗಿ ಹಲವು ಪತ್ರಿಕೆಗಳು ಚಾಲ್ತಿಯಲ್ಲಿವೆ. ವಿದ್ಯಾರ್ಥಿಗಳ ಸೃಜನಾತ್ಮಕ ವಿಚಾರಗಳು ಪತ್ರಿಕೆಯ ರೂಪ ಪಡೆದು ವಿಭಾಗದ ಇತಿಹಾಸದಲ್ಲಿ ಹೊಸ ಭಷ್ಯ ಬರೆದಿವೆ. ವಿದ್ಯಾರ್ಥಿಗಳು ಮುಂದೆ ಮಾಧ್ಯಮ ಲೋಕದಲ್ಲಿ ಎತ್ತರಕ್ಕೇರಲು ಈ ರೀತಿಯ ಪ್ರಾಯೋಗಿಕ ಪತ್ರಿಕೆಗಳು ಸಹಕರಿಸಲಿವೆ ಎಂದು ಮಾರ್ದನಿ ಪತ್ರಿಕಾ ಬಳಗಕ್ಕೆ ಶುಭಹಾರೈಸಿದರು.
ಮಾರ್ದನಿ ಪತ್ರಿಕೆಯ ಪ್ರಮುಖ ಸಂಪಾದಕರಾದ ವಿದ್ಯಾರ್ಥಿ ಸುದೀಪ್‌ರಾಜ್ ಮಾತನಾಡಿ, ಮನಸ್ಸಿನ ಅಭಿಪ್ರಾಯಗಳನ್ನು ಕಾಲೇಜು ವಿದ್ಯಾರ್ಥಿಗಳು ಮತ್ತು ಉಜಿರೆಯ ನಾಗರೀಕರಿಗೆ ತಲುಪಿಸಬೇಕು ಮತ್ತು ದೇಶದ ಆಗುಹೋಗುಗಳನ್ನು ವಿದ್ಯಾರ್ಥಿಗಳ ದೃಷ್ಟಿಕೋನದಲ್ಲಿ ವಿಶ್ಲೇಷಿಸುವ ಸಲುವಾಗಿ ಈ ಪತ್ರಿಕೆಯನ್ನು ಹೊರ ತರಲಾಗಿದೆ. ಮುಂದಿನ ದಿನಗಳಲ್ಲಿ ಗುಣಮಟ್ಟದೊಂದಿಗೆ ಪತ್ರಿಕೆಯನ್ನು ತರುವ ಆಸೆಯಿದೆ ಎಂದರು.

ಮಾರ್ದನಿ ಪತ್ರಿಕೆಗೆ ತೃತೀಯ ಬಿ.ಎ.ಯ ಬಾಲಕೃಷ್ಣ ಪುಟ ವಿನ್ಯಾಸ ಮಾಡಿದ್ದಾರೆ.ಪ್ರಾಯೋಗಿಕ ಪತ್ರಿಕೆಯನ್ನು ತಯಾರಿಸುವ ಹಂತದ ಸವಾಲುಗಳು ಹಾಗೂ ಅನುಭವಗಳ ಕುರಿತು ತಂಡ ಅನುಭವ ಹಂಚಿಕೊಂಡಿತು.ವಿಭಾಗದ ಉಪನ್ಯಾಸಕಿ ಗೀತಾ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಣಿಕಂಠ ಕಾರ್ಯಕ್ರಮ ನಿರೂಪಿಸಿದರು.

ಫೋಟೊ:ಉಜಿರೆ ಎಸ್.ಡಿ.ಎಂ. ಕಾಲೇಜಿನ ಸಮ್ಯಗ್ದರ್ಶನ ಸಭಾಭವನದಲಿ ಪತ್ರಿಕೋದ್ಯಮ ವಿಭಾಗದ ಮಾರ್ದನಿ ಪ್ರಾಯೋಗಿಕ ಪತ್ರಿಕೆಯನ್ನು ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಭಾಸ್ಕರ್ ಹೆಗಡೆ ಲೋಕಾರ್ಪಣೆಗೊಳಿಸಿದರು.

Related posts

Leave a Reply

Your email address will not be published. Required fields are marked *