Header Ads
Breaking News

ಪ್ರಾಯೋಗಿಕ ವಿಚಾರಗಳ ಕಡೆ ಗಮನ ಹರಿಸಿದ ಕಾರ್ಯಗಾರ

ಆಧುನಿಕ ತಂತ್ರಜ್ಞಾನದ ಸಹಾಯದಿಂದ ವೈಜ್ಞಾನಿಕ ಆವಿಷ್ಕಾರಗಳು ಹೆಚ್ಚಾಗುತಿದೆ ಈ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮತ್ತು ಅರಿವು ಮೂಡಿಸುವ ಸಲುವಾಗಿ ಮೂಲಭೂತ ವಿಜ್ಞಾನದ ಪ್ರಯೋಗಾತ್ಮಕ ವಿಚಾರಗಳನ್ನು ಬಿಂಬಿಸುವ, “ರೋಬೋಟಿಕ್ಸ್ ಮತ್ತು ಹೋಮ್ ಆಟೋಮೇಷನ್” ಕಾರ್ಯಗಾರವನ್ನು ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು. ಭಾರತ ಸರ್ಕಾರದ ಡಿಬಿಟಿಎಸ್ ಸ್ಟಾರ್ ಕಾಲೇಜು ಯೋಜನೆಯಡಿ, ಎಸ್.ಡಿ.ಎಂ ಕಾಲೇಜಿನ ಭೌತಶಾಸ್ತ್ರ ವಿಭಾಗವು ಈ ಕಾರ್ಯಗಾರವನ್ನು ಹಮ್ಮಿಕೊಂಡಿತ್ತು.

ಮಾನವನ ಜೀವನ ಶೈಲಿಯನ್ನು ಸುಲಭಗೊಳಿಸುವುದರಲ್ಲಿ ವೈಜ್ಞಾನಿಕ ಆವಿಷ್ಕಾರಗಳು ಬಹಳ ದೊಡ್ಡ ಪಾತ್ರವಹಿಸುತ್ತದೆ, ಏಲ್ಲಾ ತಂತ್ರಜ್ಞಾನದ ಕ್ಷೇತ್ರದಲ್ಲಿ ರೋಬೋಟಿಕ್ಸ್‍ನ ಅವಶ್ಯಕತೆಯಿದ್ದು, ಮುಂದಿನ ದಿನಗಳಲ್ಲಿ ರೋಬೋಟಿಕ್ಸ್ ಕ್ಷೇತ್ರದಲ್ಲಿ ಬಹಳಷ್ಟು ಅವಕಾಶಗಳು ಸೃಷ್ಟಿಯಾಗಲಿದೆ ಎಂದು ಕಾರ್ಯಕ್ರಮದ ಉಧ್ಘಾಟಕರಾದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತೀಶ್ಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ವೈಜ್ಞಾನಿಕ ಆವಿಷ್ಕಾರಗಳನ್ನು ಮಾಡಲು ಮೂಲಭೂತ ವಿಜ್ಞಾನದಿಂದ ಸಂಪೂರ್ಣ ಅರಿವಿರಬೇಕು. ಇಂತಹ ಕಾರ್ಯಗಾರಗಳಿಂದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕುರಿತು ಆಸಕ್ತಿ ಹೆಚ್ಚಾಗುತ್ತದೆ. ಇಂತಹ ಅನುಭವವನ್ನು ಓಳಗೊಡಿಸಿಕೊಂಡು ಸೃಜನಾತ್ಮಕ ಆವಿಷ್ಕಾರಗಳ ಕಡೆ ಗಮನ ಹರಿಸಬೇಕೆಂದು ತಿಳಿಸಿದರು.

ರೋಬೋಟಿಕ್ಸ್ ಕ್ಷೇತ್ರದಲ್ಲಿ ರೂಪುಗೊಳ್ಳುತ್ತಿರುವ ಅವಕಾಶಗಳ ಕಡೆ ಗಮನ ಹರಿಸುತ್ತಾ, ವೈಜ್ಞಾನಿಕ ಆಲೋಚನ ಲಹರಿಯನ್ನು ಓಳಗೂಡಿಸಿಕೊಳ್ಳುವುದರಿಂದ, ರೋಬೋಟಿಕ್ಸ್ ಕುರಿತಾದ ಆಸಕ್ತಿ ಮತ್ತು ಅರಿವು ಹೆಚ್ಚಾಗುತ್ತದೆ, ವಿದ್ಯಾರ್ಥಿಗಲ್ಲಿ ಇಂತಹ ಅಲೋಚನೆಗಳನ್ನು ವೃದ್ಧಿಸಲು ಈ ರೀತಿಯ ಕಾರ್ಯಗಾರಗಳು ಬಹಳಷ್ಟು ಸಹಕಾರಿಯಾಗಿದೆ ಎಂದು. ಸ್ಟಾರ್ ಕಾಲೇಜು ಯೋಜನೆಯ ಸಂಯೋಜಕರಾದ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಬಿ. ಕುಮಾರ್ ಹೆಗ್ಡೆ ನುಡಿದರು.

ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿತ ವಿಚಾರಗಳ ಅಧ್ಯಯನ ವ್ಯಾಪ್ತಿಯನ್ನು ವಿಸ್ತರಿಸಲು ಈ ರೀತಿಯ ಕಾರ್ಯಗಾರಗಳು ಬಹಳ ಸಹಾಯಕವಾಗಿದೆ ಎಂದು ಭೌತಶಾಸ್ತ್ರ ವಿಭಾಗದ ಪ್ರಾಧ್ಯಪಕರಾದ ಪ್ರೊ.ಶಶಿಶೇಖರ್ ಎನ್ ಕಾಕತ್ಕರ್ ನುಡಿದರು.

ಐ ವೇವ್ ಸಿಸ್ಟಮ್ ಬೆಂಗಳೂರು ಇದರ ಹಾರ್ಡ್‍ವೇರ್ ಡಿಸೈನಿಂಗ್ ಇಂಜಿನಿಯರ್ ಪ್ರಶಾಂತ್ ಕುಮಾರ್ ಏನ್ ಮತ್ತು, ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನ ಏಲೆಕ್ಟ್ರಾನಿಕ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾದ್ಯಾಪಕರಾದ ಫ್ರೋ. ಅವಿನಾಶ್ ಏಸ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು, ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು, ಬ್ಲೂ ಟೂತ್ ಸಂವಹನ, ಐ ಆರ್ ಸೆನ್ಸರ್‍ಗಳು, ಆರ್‍ಎಫ್‍ಐಡಿ ಸೆನ್ಸರ್, ಎಲ್‍ಈಡಿ ಡಿಸ್ಪ್ಲೇ, ಬ್ಲೂ ಟೂತ್ ಏನೇಬಲ್ಡ್ ಕಾರ್, ರೇಡಿಯೋ ಫ್ರೀಕ್ವೆನ್ಸಿ ಸಾಧನಗಳಾದ ಸ್ಮಾರ್ಟ್ ಕಾರ್ಡ್ ಮತ್ತು ಫಾಸ್ಟ್ ಟ್ಯಾಗ್ ಸರಳ ಮಾದರಿಯನ್ನು ವಿದ್ಯಾರ್ಥಿಗಳು ತಯಾರಿಸಿದರು, ಕಾರ್ಯಗಾರದಲ್ಲಿ 55ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರವನ್ನು ಸಾಯಿದೀಪ್ ಸ್ವಾಗತಿಸಿ, ನಮ್ರಥ ಜೈನ್ ವಂದಿಸಿ, ಸೌರಭ ಕಾರ್ಯಕ್ರಮವನ್ನು ನಿರೂಪಿಸಿದರು

Related posts

Leave a Reply

Your email address will not be published. Required fields are marked *