Header Ads
Breaking News

ಪ್ರಾಯೋಗಿಕ ಶಿಕ್ಷಣದಲ್ಲಿ ಒಂದು ಹೊಸ ಹೆಜ್ಜೆಎಸ್.ಡಿ.ಎಂ ಬಿವೋಕ್ “ಸ್ಕಿಲ್ ಡೇ” : ಶಂಕರ್‍ರಾವ್

ಪ್ರತಿಯೊಬ್ಬರಲ್ಲೂಒಬ್ಬ ನಾಯಕಅಡಗಿದ್ದಾನೆ. ಅವನನ್ನು ಹುಡುಕುವ ಕೆಲಸ ನಿರಂತರವಾಗಿ ನಾವು ಮಾಡಬೇಕು, ಹಾಗಿದ್ದಾಗ ಮಾತ್ರಒಬ್ಬ ಒಳ್ಳೆ ನಾಯಕಉದಯಿಸಲು ಸಾಧ್ಯಎಂದು ವಾಣಿಪದವಿ ಪೂರ್ವಕಾಲೇಜಿನ ಪ್ರಾಧ್ಯಾಪಕ ಶಂಕರ್‍ರಾವ್‍ಅಭಿಪ್ರಾಯ ಪಟ್ಟರು.

ಅವರುಇತ್ತೀಚೆಗೆಉಜಿರೆಎಸ್.ಡಿ.ಎಂಕಾಲೇಜಿನಲ್ಲಿ ಹೊಸದಾಗಿಆರಂಭವಾದ ಬಿವೋಕ್ ವಿಭಾಗದಲ್ಲಿ “ಸ್ಕಿಲ್ ಡೇ” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಾಯಕತ್ವದಕೌಶಲದ ಬಗ್ಗೆ ಮಾತನಾಡುತ್ತುದ್ದಅವರು, ಅವಕಾಶ ಸಿಗೊದಿಲ್ಲ ಅನ್ನುವುದಕ್ಕಿಂತ, ಸಿಕ್ಕಿದ ಅವಕಾಶಗಳನ್ನು ಅತ್ಯಂತ ಸಮರ್ಪಕವಾಗಿ ಬಳಸುವುದು ನಿಜವಾದ ನಾಯಕನ ಲಕ್ಷಣಅಂದರು.

ಈ ಸಂಧರ್ಬದಲ್ಲಿ ಮಾತನಾಡಿದ ಬಿವೋಕ್ ವಿಭಾಗದ ಸಂಚಲಾಕ ಸುವೀರ್‍ಜೈನ್, ವಿದ್ಯಾರ್ಥಿಗಳ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡುವಉದ್ದೇಶದಿಂದ ಹೊಸ, ಹೊಸ ಭೋಧನಾ ವಿಧಾನವನ್ನುಅನುಸರಿಸಸುವ ಬಿವೋಕ್ ವಿಭಾಗ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ, ಈ ನಿಟ್ಟಿನಲ್ಲಿ ಹೊಸದಾಗಿ ಸೇರಿಕೊಂಡ ಹೊಸ ಆಲೋಚನೆ “ಸ್ಕಿಲ್ ಡೇ”. ಪ್ರತೀ ಶನಿವಾರಒಬ್ಬ ಸಂಪನ್ಮೂಲ ವ್ಯಕ್ತಿಯಿಂದ 21 ಶತಮಾನದ ವಿವಿಧ ಕೌಶಲ್ಯಗಳನ್ನು “ಸ್ಕಿಲ್ ಡೇ” ಮೂಲಕ ಪ್ರಯೋಗಿಕವಾಗಿ ಹೇಳಿಕೊಡಲಾಗುತ್ತದೆ, ಇದು ವಿದ್ಯಾರ್ಥಿಗಳಿಗೆ ಹೊಸ ಕೌಶಲ್ಯಗಳನ್ನು ಅತ್ಯಂತ ನಿಖರವಾಗಿಕಲಿಯಲು ಸಹಾಯವಾಗುತ್ತದೆಎಂದರು.

ಕಾರ್ಯಕ್ರಮದಲ್ಲಿ ಬಿವೋಕ್‍ನ ಪ್ರಾಧ್ಯಪಕರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *