Header Ads
Breaking News

ಪ್ರೊ. ಕೆ. ಚಿನ್ನಪ್ಪ ಗೌಡರ 2 ಕೃತಿ ಲೋಕಾರ್ಪಣೆ- ಮಂಗಳೂರು ವಿವಿ ಕಾಲೇಜಿನಲ್ಲಿ ಬಿಡುಗಡೆ ಕಾರ್ಯಕ್ರಮ

ಮಂಗಳೂರು ವಿಶ್ವವಿದ್ಯಾಲಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಹಾಗೂ ಮದಿಪು ಪ್ರಕಾಶನ ಮಂಗಳ ಗಂಗೋತ್ರಿ ಆಶ್ರಯದಲ್ಲಿ ಹಾವೇರಿ ಜನಪದ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ ಅವರ ಕೆಲೆಪು ಪೆರಡೆ ಕೆಲೆಪು ತುಳು ಕವನ ಸಂಕಲನ ಮತ್ತು ಬೇಲಿಯೊಳಗಿನ ಬೆಳೆ ಪ್ರಬಂಧ ಸಂಕಲನ ಬಿಡುಗಡೆ ನಗರದ ವಿವಿ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಿತು.

ಲೇಖಕ ಡಾ. ನರೇಂದ್ರ ರೈ ದೇರ್ಲ ಪುಸ್ತಕ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಚಿನ್ನಪ್ಪ ಗೌಡರು ದೈವಾರಾಧನೆ ಸಂಶೋಧನೆಯ ಬಳಿಕ ಮಾಹಿತಿ ಒದಗಿಸಿದ ಜನರನ್ನು ಮರೆಯದೆ ಕಾವ್ಯ ಪ್ರಬಂಧಗಳ ಮೂಲಕ ಸಮುದಾಯದ ಬಗ್ಗೆ ನೆನಪು ಮಾಡಿಕೊಳ್ಳುತ್ತಾರೆ. ಇದು ಡಾ. ಚಿನ್ನಪ್ಪ ಗೌಡರ ದೊಡ್ಡ ಗುಣ ಎಂದರು.
ಲೇಖಕ ಪ್ರೊ. ಕೆ. ಚಿನ್ನಪ್ಪ ಗೌಡ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ವಿಶ್ವವಿದ್ಯಾನಿಲಯ ಪ್ರಾಂಶುಪಾಲರಾದ ಡಾ. ಹರೀಶ್ ಅಧ್ಯಕ್ಷತೆ ವಹಿಸಿದ್ದರು.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠದ ಸಂಯೋಜಕ ಡಾ. ಮಾಧವ ಎಂ.ಕೆ. ಉಪಸ್ಥಿತರಿದ್ದರು. ನಟ, ಗಾಯಕ ಮೈಮ್ ರಾಮ್ ದಾಸ್ ಅವರು ಪ್ರೊ. ಕೆ. ಚಿನ್ನಪ್ಪ ಗೌಡರ ಅವರ ಕವನ ಹಾಡಿದರು.

Related posts

Leave a Reply

Your email address will not be published. Required fields are marked *