Header Ads
Header Ads
Breaking News

ಫರಂಗಿಪೇಟೆಯ ಓಂ ಶ್ರೀ ವೀರಾಂಜನೆಯ ವ್ಯಾಯಮ ಶಾಲೆ : ದೇವಸ್ಥಾನ ಪುನರ್ ನಿರ್ಮಾಣ ಸಮಿತಿ ರಚನೆ

ಬಂಟ್ವಾಳ: ಫರಂಗಿಪೇಟೆಯ ಓಂ ಶ್ರೀ ವೀರಾಂಜನೆಯ ವ್ಯಾಯಮ ಶಾಲೆಯ ಕುರಿತು ತಾಂಬೂಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಓಂ ಶ್ರೀ ಆಂಜನೆಯ ದೇವರ ನೂತನ ದೇಗುಲ ನಿರ್ಮಾಣಗೊಳ್ಳಲಿದ್ದು ದೇವಸ್ಥಾನ ಪುನರ್ ನಿರ್ಮಾಣ ಸಮಿತಿ ರಚನೆ ಫರಂಗಿಪೇಟೆಯಲ್ಲಿ ನಡೆಯಿತು.

ಕ್ಷೇತ್ರದ ಪ್ರಧಾನ ಅರ್ಚಕ ಮುರಳೀ ಭಟ್ ಕಲ್ಲತಡಮೆ ದೀಪ ಪ್ರಜ್ವಲಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ತೇವು ತಾರಾನಾಥ ಕೊಟ್ಟಾರಿ ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಗ್ರಾಮಗಳು ಸುಭಿಕ್ಷೆಯಾಗುತ್ತದೆ ಎಂದರು.ಕಾರ್ಯದರ್ಶಿ ಕರುಣಕಾರ ಕೊಟ್ಟಾರಿ ವಿ4 ನ್ಯೂಸ್‌ನೊಂದಿಗೆ ಮಾತನಾಡಿ ಸುಮಾರು 1 ಕೋಟಿ ರುಪಾಯಿ ಅಂದಾಜು ವೆಚ್ಚದಲ್ಲಿ ನೂತನ ದೇವಾಲಯ ನಿರ್ಮಾಣಗೊಳ್ಳಲಿದ್ದು ಶೀಘ್ರ ಶಿಲಾನ್ಯಾಸ ಸಮಾರಂಭವೂ ನಡೆಯಲಿದೆ. ಗ್ರಾಮಸ್ಥರೆಲ್ಲರ ಸಲಹೆ ಸಹಕಾರ ಬೇಕಾಗಿದೆ ಎಂದು ವಿನಂತಿಸಿಕೊಂಡರು. ಓಂ ಶ್ರೀ ವೀರಾಂಜನೆಯ ವ್ಯಾಯಮ ಶಾಲೆಯ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಶಿಕ್ಷಕ ಪ್ರಭಾಕರ ಮಾಸ್ತರ್, ಮಹಾಬಲ ಕೊಟ್ಟಾರಿ ದೇರೆಬೈಲು, ಪಕಾಶ್ಚಂದ್ರ ರೈ ದೇವಸ್ಯ, ದಾಮೋದರ ಶೆಟ್ಟಿ ಅರ್ಕುಳ, ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *