
ಒಂದು ಕಡೆ ಮೀನುಗಾರಿಕೆಯೇ ಮುಖ್ಯ ಕಸುಬಾಗಿ ನಂಬಿಕೊಂಡ ಮೀನುಗಾರರು. ಇನ್ನೊಂದೆಡೆ ಅಕ್ರಮ ಮರಳುಗಾರಿಕೆಯಿಂದ ಸಂಕಷ್ಟವನ್ನು ಅನುಭವಿಸುತ್ತಿರುವ ನದಿ ತೀರದ ಜನತೆ. ಈ ಎಲ್ಲಾ ಸಮಸ್ಯೆಯಿಂದಾಗಿ ಉದ್ಯೋಗವಿಲ್ಲದೆ ಜೀವನ ನಡೆಸಲು ಕಷ್ಟಪಡುತ್ತಿರುವ ಮೀನುಗಾರರ ಕುಟುಂಬ.ಅಷ್ಟಕ್ಕೂ ಈ ಸಮಸ್ಯೆ ಇರೋದಾದ್ರೂ ಎಲ್ಲಿ. ಈ ವರದಿ ನೋಡಿ…
ಮಂಗಳೂರಿನ ಫಲ್ಗುಣಿ ನದಿಯಲ್ಲಿ ಅನಧಿಕೃತವಾಗಿ ಮರಳು ತೆಗೆಯುತ್ತಿದ್ದು ಇದರಿಂದ ನದಿಯನ್ನೇ ನಂಬಿಕೊಂಡು ಜೀವನ ಸಾಗಿಸುವವರಿಗೆ ಬಹುದೊಡ್ಡ ಸಮಸ್ಯೆ ಬಂದೋದಗಿದೆ. ಗುರುಪುರದಿಂದ ಉಳ್ಳಾಲ ತನಕ ಮೀನುಗಾರಿಕೆಯನ್ನೇ ಮಾಡಿ ಜೀವನ ನಡೆಸುತ್ತಿರುವ ಸುಮಾರು 500ಕ್ಕೂ ಹೆಚ್ಚು ನದಿ ತೀರದ ಮೀನುಗಾರರು ಸಂಕಷ್ಟದಲ್ಲಿದ್ದಾರೆ. ನದಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವುದರಿಂದ ಮೀನುಗಾರಿಕೆಗೆ ತೊಂದರೆಯಾಗಿದೆ. ಮರಳು ತೆಗೆದು ದೊಡ್ಡ ದೊಡ್ಡ ಹೊಂಡಗಳು ಗೋಚರವಾಗಿದ್ದು, ಅಪಾಯದ ವಲಯವಾಗಿ ಮಾರ್ಪಾಟ್ಟಿದೆ.
ಫಲ್ಗುಣಿ ನದಿಯನ್ನು ನೆಚ್ಚಿಕೊಂಡು ಮೀನುಗಾರಿಕೆ ನಡೆಸುತ್ತಿರುವ ಅದೇಷ್ಠೋ ಮಂದಿಗೆ ಇದೀಗ ಆತಂಕ ಶುರುವಾಗಿದೆ. ಈ ರೀತಿ ನದಿಯಿಂದ ಮರಳು ತೆಗೆದರೆ ಮೀನುಗಾರಿಕೆಯನ್ನು ಮಾಡುವುದು ಹೇಗೆ ಎಂಬ ಭಯದ ವಾತಾವರಣ ನಿರ್ಮಾಣವಾಗಿದೆ. ಚಟ್ಟಿಯ ಸಹಾಯದಿಂದ ಮರಳು ತೆಗೆಯಿರಿ ಆದರೆ ಜಲ್ಲಾ ಉಪಯೋಗಿಸಿ ಮರಳು ತೆಗೆಯುವದರಿಂದ ಮರಳಿನ ದಿಬ್ಬಗಳಿಲ್ಲದೆ ಇರುವುದಿಂದ ಮೀನುಗಾರಿಕೆ ನಡೆಸಲು ತೊಂದರೆಯಾಗುತ್ತದೆ. ನದಿಯಲ್ಲಿ ಮೀನು ಸಹಿತ ಮರುವಾಯಿ ತೆಗೆದು ಜೀವನ ಸಾಗಿಸುವವರು ನಾವು. ಈ ರೀತಿ ಮರಳು ತೆಗೆದರೆ ಮುಂದಿನ ದಿನಗಳಲ್ಲಿ ನಮಗೆ ಬಹುದೊಡ್ಡ ಸಮಸ್ಯೆ ಉಂಟಾಗಲಿದೆ ಹೇಳುತ್ತಾರೆ ಸ್ಥಳೀಯ ಮೀನುಗಾರರು.
ಫಲ್ಗುಣಿ ನದಿಯಲ್ಲಿ ಮರಳುಗಾರಿಕೆ ನಡೆಸುವ ಬಗ್ಗೆ ನದಿ ಮೀನುಗಾರರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ, ಸಂಬಂಧಪಟ್ಟ ಸಚಿವರಿಗೆ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೂ ಮನವಿಯನ್ನು ನೀಡಿದ್ದೇವೆ. ಆದರೆ ಇದುವರೆಗೆ ಯಾವುದೇ ಸ್ಪಂದನೆ ದೊರಕ್ಕಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಸಮಸ್ಯೆಗೆ ಮುಕ್ತಿ ದೊರೆಯದಿದ್ದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಸ್ಥಳೀಯರಾದ ಯಾದವ ತಿಂಗಳಾಯ, ಕಿರಣ್ ಕೆರ್ಕರಾ, ನವೀನ್ ಸಾಲ್ಯಾನ್, ಪೂರ್ಣಿಮಾ, ಉಷಾ, ವಿಜಯ್, ಹೇಮಾ, ತಾರನಾಥ್, ಹರೀಶ್, ಹೋಸೆಫ್ ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಫಲ್ಗುಣಿ ನದಿಯಲ್ಲಿ ನದಿ ಮೀನುಗಾರರ ಸಂಘದವರು ವಿಶೇಷ ಪೂಜೆ ನೆರವೇರಿಸಿದರು.ಒಟ್ಟಿನಲ್ಲಿ ಪಲ್ಗುಣಿ ನದಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಅದೇಷ್ಠೋ ಮಂದಿಗೆ ಇದೀಗ ಸಂಕಷ್ಟ ಎದುರಾಗಿದೆ. ಈ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಬೇಕಾಗಿದೆ.