Header Ads
Breaking News

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಚಿವ ಸುಧಾಕರ್ ಭೇಟಿ

ಮಂಗಳೂರಿನಲ್ಲಿರುವ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಅಸ್ಪತ್ರೆಗೆ ರಾಜ್ಯ ವೈದ್ಯಕೀಯ ಸಚಿವ ಡಾ. ಕೆ. ಸುಧಾರಕ್ ಅವರು ಭೇಟಿ ನೀಡಿದರು. ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ರಿಚಾರ್ಡ್ ಕುವೆಲ್ಲೊ ರುಡಾಲ್ಫ್ ರವಿ ಡೇಸಾ ಅವರು ಸಚಿವರನ್ನು ಸ್ವಾಗತಿಸಿದರು. ಕೋವಿಡ್ ಹಿನ್ನೆಯಲ್ಲಿ ಸರ್ಕಾರಕ್ಕೆ ಸಹಾಕರ ನೀಡುವಲ್ಲಿ ಆಸ್ಪತ್ರೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಲಾಯಿತು.

ಈ ವೇಳೆ ಮಾತನಾಡಿದ ಸಚಿವರು, ಆಸ್ಪತ್ರೆಯು ಕೋವಿಡ್ ಲ್ಯಾಬ್ ಸ್ಥಾಪಿಸಿ ಕೊರೊನಾ ಪರೀಕ್ಷೆಗಳನ್ನು ನಡೆಸುವ ಮೂಲಕ ರಾಜ್ಯ ಸರ್ಕಾರಕ್ಕೆ ನೀಡುತ್ತಿರುವ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಫಾದರ್ ಮುಲ್ಲರ್ ಸಿಮ್ಯುಲೇಶನ್ ಕೇಂದ್ರ, ವಿವಿಧ ವಿಭಾಗಗಳನ್ನು ಸಚಿವರು ವೀಕ್ಷಿಸಿದರು.

ಈ ಸಂದರ್ಭ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಫಾದರ್. ಅಜಿತ್ ಬಿ. ಮಿನೇಜಸ್, ಮೆಡಿಕಲ್ ಕಾಲೇಜಿನ ಡೀನ್ ಡಾ. ಜೆ.ಪಿ. ಆಳ್ವಾ, ತುಂಬೆ ಆಸ್ಪತ್ರೆಯ ಆಡಳಿತಾಧಿಕಾರಿ ಸಿಲ್ವೆಸ್ಟರ್ ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಉದಯಕುಮಾರ್, ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ ಆಡಳಿತಾಧಿಕಾರಿ ರೋಶನ್ ಕ್ರಾಸ್ಟ, ನೆಲ್ಸನ್ ಧೀರಜ್ ಪಾಯ್ಸ್ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *