Header Ads
Header Ads
Breaking News

ಫಿಟ್ ಇಂಡಿಯಾ ಅಂದೋಲನಕ್ಕೆ ಪ್ರಧಾನಿ ಮೋದಿಯವರಿಂದ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಇಂದಿರಾ ಗಾಂಧಿ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ “ಫಿಟ್ ಇಂಡಿಯಾ” ಆಂದೋಲನಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ರಾಷ್ಟ್ರೀಯ ಕ್ರೀಡಾ ದಿನದಂದೇ ಪ್ರಧಾನಿ ಮೋದಿ ಫಿಟ್ ಇಂಡಿಯಾ ಆಂದೋಲನಕ್ಕೆ ಚಾಲನೆ ನೀಡಿದ್ದು, ಕ್ರೀಡೆ ಎನ್ನುವುದು ನೇರವಾಗಿ ನಮ್ಮ ದೇಹದ ಫಿಟ್ ನೆಸ್‌ಗೆ ಸಂಬಂಧ ಹೊಂದಿದೆ. ಆದರೆ ಇಂದಿನ ಫಿಟ್ ಇಂಡಿಯಾ ಆಂದೋಲನ ಅದಕ್ಕಿಂತ ಸಂಪೂರ್ಣ ಭಿನ್ನವಾದದ್ದು.

ಫಿಟ್ನೆಸ್ ಎಂಬುದು ಕೇವಲ ಕ್ರೀಡೆಯಲ್ಲ. ಆದರೆ ಅದು ನಮ್ಮ ಬದುಕಿನ ಒಂದು ಭಾಗ ಎಂದು ಹೇಳಿದ ಪ್ರಧಾನಿ ಮೋದಿಯವರು “ತಂತ್ರಜ್ಞಾನ ಬಂದ ನಂತರ ದೈಹಿಕ ಚಟುವಟಿಕೆಗಳು ಕಡಿಮೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಕ್ರೀಡೆ ಫಿಟ್ನೆಸ್ ನೊಂದಿಗೆ ನೇರವಾದ ಸಂಬಂಧ ಹೊಂದಿದೆ. ಕ್ರೀಡಾಪಟುಗಳು ಪಡೆಯುವ ಮೆಡಲ್ ಭಾರತಕ್ಕೆ ಹೆಮ್ಮೆಯ ಸಂಗತಿ, ನವಭರತದ ನಾಗರಿಕರು ಸದೃಢರಾಗುವತ್ತ ಗಮನಹರಿಸಲಿ ಎಂದು ಮೋದಿ ಹೇಳಿದ್ದಾರೆ.

Related posts

Leave a Reply

Your email address will not be published. Required fields are marked *