Header Ads
Header Ads
Breaking News

ಫೆ.14ರಂದು ಶ್ರೀಪಾತಾಳ ಯಕ್ಷ ಪ್ರತಿಷ್ಠಾನ ವತಿಯಿಂದ ಪಾತಾಳ ಪ್ರಶಸ್ತಿ ಪ್ರದಾನ

ಶ್ರೀಪಾತಾಳ ಯಕ್ಷ ಪ್ರತಿಷ್ಠಾನ ವತಿಯಿಂದ ನೀಡಲ್ಪಡುವ ಪಾತಾಳ ಪ್ರಶಸ್ತಿಗೆ ಮೂರು ಮಂದಿ ಯಕ್ಷಗಾನ ದಿಗ್ಗಜರು ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.ಈ ಕುರಿತು ಮಂಗಳೂರಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿಯನ್ನು ಪುರಸ್ಕರಿಸಲಾಗುವುದು ಬಂಟ್ವಾಳ ತಾಲೂಕಿನ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಫೆಬ್ರವರಿ 14ರಂದು ಪಾತಾಳ ಪ್ರಶಸ್ತಿಯನ್ನ ಪ್ರದಾನ ಮಾಡಲಾಗುವುದು. ಹಿರಿಯ ಸ್ತ್ರಿವೇಷಧಾರಿಗಳಾದ ಡಾ.ಕೋಳ್ಯೂರು ರಾಮಚಂದ್ರ ರಾವ್, ಮಂದಾರ್ತಿ ಅಣ್ಣಪ್ಪ ನಾಯ್ಕ್, ಮತ್ತು ಮೂರೂರು ವಿಷ್ಣುಭಟ್ ಇವರಿಗೆ ಪ್ರತಿಷ್ಠಿತ ಪಾತಾಳ ಪ್ರಶಸ್ತಿಗೆ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.ಸುದ್ಧಿಗೋಷ್ಠಿಯಲ್ಲಿ ಪಾತಾಳ ವೆಂಕಟ್ರಮಣ ಭಟ್, ಅಂಬಾಪ್ರಸಾದ ಪಾತಾಳ, ಶ್ರೀರಾಮಪಾತಾಳ ಉಪಸ್ಥಿತರಿದ್ದರು.

Related posts

Leave a Reply