
ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಫೆ.14 ಹಾಗೂ 15ರಂದು ನಡೆಯುವ ತುಳುನಾಡ ಜಾತ್ರೆ 2019- ಶ್ರೀ ಒಡಿಯೂರು ರಥೋತ್ಸವದ ಅಂಗವಾಗಿ ಮಂಗಳವಾರ ಮಂಗಳೂರು ಶ್ರೀ ಮಂಗಳಾದೇವಿ ದೇವಸ್ಥಾನದಿಂದ ಆಗಮಿಸಿದ ಹೊರೆಕಾಣಿಕೆ ಮೆರವಣಿಯನ್ನು ಕ್ಷೇತ್ರದಲ್ಲಿ ಸ್ಚಾಗತಿಸಲಾಯಿತು.
ಒಡಿಯೂರು ಕ್ಷೇತ್ರದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೊರೆಕಾಣಿಕೆಯನ್ನು ಸ್ವಾಗತಿಸಿ ಉಗ್ರಾಣ ಮುಹೂರ್ತ ನಡೆಸಿದರು. ಸಾದ್ವಿ ಮಾತಾನಂದಮಯೀ ದಿವ್ಯ ಉಪಸ್ಥಿತಿಯನ್ನು ಕರುಣಿಸಿದ್ದರು. ಮಂಗಳೂರು ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಹೊರೆಕಾಣಿಕೆ ಸಮಿತಿ ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಅನಂತಾಡಿ ಚಾಲನೆ ನೀಡಿದರು. ಕನ್ಯಾನದಿಂದ ಭವ್ಯ ಶೋಭಾ ಯಾತ್ರೆಗೆ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಚಾಲನೆ ನೀಡಿದರು. ಸುಮಾರು 75 ಅಧಿಕ ವಾಹನಗಳಲ್ಲಿ ಹೊರೆಕಾಣಿಕೆ ಕ್ಷೇತ್ರಕ್ಕೆ ಆಗಮಿಸಿತು.
ವರದಿ: ಮಹಮ್ಮದ್ ಆಲಿ ವಿಟ್ಲ