
ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ವಾರ್ಷಿಕ ಮೆಚ್ಚಿ ಜಾತ್ರೆಯು ಇದೇ ಬರುವ ಫೆ.26ರಂದು ರಾತ್ರಿ ಭಂಡಾರವೇರಿ ಫೆ.27ರಂದು ನಡೆಯಲಿದ್ದು, ಈ ಪ್ರಯುಕ್ತ ಇಂದು ಹಾಳೆ ಕಡಿಯುವ ಕಾರ್ಯಕ್ರಮ ನೆರವೇರಿತು.
ಕೆದಿಲ ಗ್ರಾಮದಿಂದ ಹಾಳೆ ಕಡಿದು ಅವುಗಳನ್ನು ವಾದ್ಯಘೋಷದೊಂದಿಗೆ ಮೆಚ್ಚಿ ಜಾತ್ರೆ ನಡೆಯುವ ಬಂಟ್ರಿಂಜ ಮಾಡಕ್ಕೆ ಹೊತ್ತು ತರಲಾಯಿತು. ಬಳಿಕ ದೈವಸ್ಥಾನದ ಬಳಿಯ ಗದ್ದೆಯಲ್ಲಿ ಸಂಪ್ರದಾಯದಂತೆ ಚೆಂಡಾಟ ನಡೆಯಿತು. ಪ್ರಧಾನ ಅರ್ಚಕರ ಮಾರ್ಗದರ್ಶನದಲ್ಲಿ ಪರಿಚಾರಕ ವರ್ಗದವರು ಈ ಕಾರ್ಯದಲ್ಲಿ ಪಾಲ್ಗೊಂಡರು ದೈವಸ್ಥಾನದ ಆಡಳಿತ ಮೊಕ್ತೇಸರರು, ಪರಿಚಾರಕ ವರ್ಗದವರು ಉಪಸ್ಥಿತರಿದ್ದರು.