
ಟಿವಿ, ಫ್ರಿಡ್ಜ್, ಬೈಕ್ ಇದ್ರೆ ಬಿಪಿಎಲ್ ಕಾರ್ಡ್ ರದ್ದು ಮಾಡುವುದಾಗಿ ಆಹಾರ ಸಚಿವರ ಹೇಳಿಕೆಗೆ ಮಾಜಿ ಸಚಿವ ಯು.ಟಿ. ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸರಕಾರಕ್ಕೆ ಜನಸಾಮಾನ್ಯರ ನಾಡಿಮಿಡಿತ ಗೊತ್ತಿಲ್ಲ ಮೊದಲು ರೇಷನ್ ಕಾರ್ಡ್ ಜನರಿಗೆ ತಲುಪಿಸುವ ಕೆಲಸ ಮಾಡಲಿ. ಟಿವಿ, ಫ್ರಿಡ್ಜ್, ಬೈಕ್ ಇದ್ರೆ ಕಾರ್ಡ್ ರದ್ದು ಮಾಡುವುದಾಗಿ ಹೇಳ್ತಿದ್ದಾರೆ. ಆ ಪಟ್ಟಿಯಲ್ಲಿ ಮೊಬೈಲ್ ಸೇರಿಸಿದ್ರೆ ಎಲ್ಲಾ ಬಿಪಿಎಲ್ರದ್ದು ಆಗುತ್ತಿತ್ತುಮೊಬೈಲ್ ಇಲ್ಲದ ಮನೆಗಳು ಹೇಗೆ ಇಲ್ಲವೋ. ಹಾಗೆಯೇ ಟಿವಿ, ಫ್ರಿಡ್ಜ್, ಬೈಕ್ ಇಲ್ಲದ ಮನೆಗಳಿಲ್ಲಅದು ಐಷಾರಾಮಿ ಎನ್ನಲಾಗದು, ಅಗತ್ಯ ವಸ್ತುಗಳಾಗಿದೆ. ಈ ಹಿಂದೆಯೂ ಬಿಜೆಪಿ ಸರಕಾರವಿದ್ದಾಗ 15 ಮಾನದಂಡಗಳಿದ್ದವು. ಬಿಜೆಪಿ ಸರಕಾರದ ಅವಧಿಯಲ್ಲಿ 500 ರೂ. ಕರೆಂಟ್ ಬಿಲ್ ಬಂದ್ರೂಬಿಪಿಎಲ್ ಕಾರ್ಡ್ ರದ್ದು ಆಗುತ್ತಿದ್ದವು. ಕಾಂಗ್ರೆಸ್ ಕೇವಲ ಮೂರು ಮಾನದಂಡಗಳನ್ನಷ್ಟೇ ನಿರ್ಧರಿಸಿತ್ತು. ಖುದ್ದು ನಾನೇ ಆಹಾರ ಸಚಿವನಾಗಿದ್ದಾಗ ಚರ್ಚಿಸಲಾಗಿತ್ತು. ಈ ಬಗ್ಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗಿತ್ತು. ಬಿಜೆಪಿ ಸರಕಾರ ಉತ್ತಮ ಯೋಜನೆ ನೀಡುವ ಕೆಲಸ ಮಾಡಲಿ. ತಪ್ಪನ್ನ ಸರಿಪಡಿಸುವ ಬದಲು ಬಿಜೆಪಿ ಮತ್ತೆ ತಪ್ಪು ಮಾಡುತ್ತಿದೆ. ಬಡವರ ಯೋಜನೆಯನ್ನ ನಾಶ ಮಾಡಲು ಮುಂದಾಗಿದೆ. ರಾಜ್ಯ, ಕೇಂದ್ರ ಸರಕಾರ ಸೇರಿ ಯೋಜನೆ ನಾಶ ಮಾಡಲು ಹೊರಟಿದೆಕಾಂಗ್ರೆಸ್ ಸರಕಾರ ಮಾಡಿದ್ದು “ಗರೀಬಿ ಹಠಾವೋ”, ಬಿಜೆಪಿ ಮಾಡುತ್ತಿರುವುದು “ಗರೀಬೋಂಕೊ ಹಠಾವೋ”, ಸರಕಾರದ ಈ ನಿರ್ಧಾರದ ಬಗ್ಗೆ ಸಚಿವರ ಜೊತೆ ಮಾತನಾಡುತ್ತೇನೆ. ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಸರಕಾರ ಉಳಿಯುವುದಿಲ್ಲ. ಮಾಜಿ ಆರೋಗ್ಯ ಸಚಿವ ಯುಟಿ ಖಾದರ್ ಹೇಳಿದರು.