Header Ads
Header Ads
Breaking News

ಬಂಟ್ವಾಳದಲ್ಲಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ:ಗಮನ ಸೆಳೆದ ಸಾಂಸ್ಕೃತಿಕ ಮೆರವಣಿಗೆ.

ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಫರಂಗಿಪೇಟೆ ಸೇವಾಂಜಲಿಯ ಡಾ. ಎಫ್.ಎಚ್. ಒಡೆಯರ್ ವೇದಿಕೆಯ, ಎ.ಕೆ. ಮಹಾಬಲ ಶೆಟ್ಟಿ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಬಂಟ್ವಾಳ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಶುಕ್ರವಾರ ಸಂಜೆ ವೈಭವದ ಚಾಲನೆ ಸಿಕ್ಕಿದೆ.
ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಭುವನೇಶ್ವರಿಯ ಮೆರವಣಿಗೆಗೆ ಬಿ.ಎ. ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಬಿ.ಅಬ್ದುಲ್ ಸಲಾಂ ತುಂಬೆ ಪದವಿ ಪೂರ್ವ ಕಾಲೇಜಿನ ಬಳಿ ಚಾಲನೆ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರ ಪೂರ್ಣಕುಂಭ ಕಳಸ, ನುಡಿ ಕುಣಿತ, ಬ್ಯಾಂಡ್‌ಸೆಟ್, ದಪ್ ಕುಣಿತ, ವಿವಿಧ ಸ್ತಬ್ದ ಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿ ವಿಶೇಷ ಮೆರುಗು ನೀಡಿತು.

ಬಳಿಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ವಸ್ತು ಪ್ರದರ್ಶನ ಉದ್ಘಾಟಿಸಿದರು.
ಮಾಜಿ ಶಾಸಕ ವೈಎಸ್‌ವಿ ದತ್ತ ಸಮ್ಮೇಳನವನ್ನು ಉದ್ಘಾಟಿಸಿದರು. ಮಾಜಿ ಶಾಸಕ ವೈಎಸ್‌ವಿ ದತ್ತ ಸಮ್ಮೇಳನವನ್ನು ಉದ್ಘಾಟಿಸಿದರು. ಅವರು ಮಾತನಾಡಿ ಯುವ ಜನಾಂಗಕ್ಕೆ ಕನ್ನಡ ಸಾಹಿತ್ಯದ ಸೊಬಗು ತಿಳಿಯದೇ ಹೋದರೆ ಕನ್ನಡ ಸಾಹಿತ್ಯ ಸಮ್ಮೇಳನಗಳು ಕೇವಲ ನಾಲ್ಕು ಗೋಡೆಯ ಮಧ್ಯೆ ಉಳಿಯುತ್ತದೆ ಯೇ ವಿನಃ ಜನಾಂದೋಲನವಾಗುವುದಿಲ್ಲ ಎಂದರು. ಕನ್ನಡ ಶಾಲೆ ಗಳು ಮುಚ್ಚಿ ಹೋಗುತ್ತಿದ್ದು ಕನ್ನಡ ಶಾಲೆಗಳ ಅಸ್ಥಿತ್ವಕ್ಕೆ ಕುತ್ತು ಬಂದಿದೆ. ಬಡವ ಹಾಗೂ ಶ್ರೀಮಂತರಿಗೆ ಒಂದೇ ರೀತಿಯ ಶಿಕ್ಷಣ ನೀಡುವ ಏಕರೂಪದ ಶಿಕ್ಷಣ ಜಾರಿ ಬರ ಬೇಕಾಗಿದೆ ಎಂದರು.

v4news.com

ಸಮ್ಮೇಳನಾಧ್ಯಕ್ಷ ಪ್ರೊ. ತುಕರಾಮ ಪೂಜಾರಿ ಮಾತನಾಡಿ ಸಾಹಿತ್ಯ ಎನ್ನುವುದು ಒಂದು ನಿರ್ದಿಷ್ಟ ಜಾತಿ, ಧರ್ಮ, ಜನಾಂಗಕ್ಕೆ ಸೀಮಿತವಾದುದಲ್ಲ, ಇದು ಈ ಎಲ್ಲಾ ಗಡಿಯನ್ನು ಮೀರಿ ನಿಂತಿರುವ ಜ್ಞಾನ ಶಿಸ್ತು. ಇದು ನಮ್ಮ ಸಂಸ್ಕಾರ, ಸಂಸ್ಕೃತಿ. ಮನುಷ್ಯ ಸಂಬಂಧ ಸದೃಢವಾಗಿರಲು ಸಾಹಿತ್ಯ ಸೇತುಬಂಧವಿದ್ದಂತೆ ಆದ್ದರಿಂದ ಸಾಹಿತ್ಯ ಬದುಕಿಗೆ ಹತ್ತಿರವಿದ್ದಾಗ ಮಾತ್ರ ಅದನ್ನು ಸ್ವೀಕರಿಸಬಹುದು ಎಂದು ಅಭಿಪ್ರಾಯ ಪಟ್ಟರು.
ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಸ್ಮರಣ ಸಂಚಿಕೆ ಅನಾವರಣ ಗೊಳಿಸಿದರು. ಹಿರಿಯ ಸಾಹಿತಿ ಏರ್ಯ ಡಾ. ಲಕ್ಷ್ಮೀನಾರಾಯಣ ಆಳ್ವ ಹೊಸ ಕೃತಿಗಳನ್ನು ಬಿಡುಗಡೆಗೊಳಿಸಿದರು, ಮುಖ್ಯ ಅತಿಥಿಗಳಾಗಿ ನಿಕಟಪೂರ್ವ ಸಮ್ಮೇಳಣಾಧ್ಯಕ್ಷ ಡಾ. ಪಾದೆಕಲ್ಲು ವಿಷ್ಣುಭಟ್, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷ ಅರ್ಕುಳ ಬೀಡು ವಜ್ರನಾಭ ಶೆಟ್ಟಿ, ಉದ್ಯಮಿಗಳಾದ ಜಗನ್ನಾಥ ಚೌಟ, ಮಹಮ್ಮದ್ ಬಾವಾ ಎಫ್ ಉಪಸ್ಥಿತರಿದ್ದರು.

Related posts

Leave a Reply