Header Ads
Header Ads
Breaking News

ಬಂಟ್ವಾಳದ ರಾಯಿ ಸಮೀಪದ ಬಾರ್ಜಾರು ತಿರುವು ರಸ್ತೆಯಲ್ಲಿ ಎಗ್ಗಿಲ್ಲದೆ ಹರಿಯುತ್ತಿರುವ ಮಳೆ ನೀರು

ಬಂಟ್ವಾಳ-ಮೂಡುಬಿದ್ರೆ ಮುಖ್ಯರಸ್ತೆ ನಡುವಿನ ರಾಯಿ ಸಮೀಪದ ಬಾರ್ಜಾರು ಎಂಬಲ್ಲಿ ಅಪಘಾತ ವಲಯವಾಗಿ ಗುರುತಿಸಿಕೊಂಡ ತಿರುವು ರಸ್ತೆಯಲ್ಲಿ ಮಳೆ ನೀರು ಎಗ್ಗಿಲ್ಲದೆ ಹರಿದಾಡುತ್ತಿದೆ. ಈ ರಸ್ತೆ ಬದಿ ಕಳೆದ ವರ್ಷ ಬಹುಗ್ರಾಮ ಕುಡಿಯುವ ನೀರಿನ ಪೈಪ್ ಹಾದು ಹೋಗಿದ್ದು, ಅಂದು ಜೆಸಿಬಿ ಮೂಲಕ ಕೊರೆದ ಚರಂಡಿ ಬಳಿಕ ಮುಚ್ಚಿ ಹೋಗಿದೆ. ಈ ನಡುವೆ ಇಲ್ಲಿನ ಖಾಸಗಿ ಜಮೀನುದಾರರು ರಸ್ತೆ ಬದಿ ಆವರಣ ಗೋಡೆ ನಿರ್ಮಿಸಿದ ಪರಿಣಾಮ ಮಳೆನೀರು ಸರಾಗವಾಗಿ ಹರಿದು ಹೋಗಲು ಅವಕಾಶವೇ ಇಲ್ಲ. ಇಲ್ಲಿನ ಗದ್ದೆಯೊಂದರ ಬಳಿ ಕಿರು ತೋಡಿನಿಂದ ಹರಿದು ಬರುವ ನೀರು ಕೂಡಾ ಇದೇ ರಸ್ತೆಯ ಮೇಲೆ ಹರಿದು ಕೆಳಭಾಗದ ಗದ್ದೆಗೆ ಹರಿಯುತ್ತಿದೆ. ಈ ತಿರುವಿನಲ್ಲಿ ಬೃಹತ್ ಗಾತ್ರದ ಅಪಾಯಕಾರಿ ಮರಗಳಿದ್ದು, ಅವುಗಳನ್ನು ತೆರವುಗೊಳಿಸುವಲ್ಲಿ ಕೂಡಾ ಅರಣ್ಯ ಇಲಾಖೆ ಅಧಿಕಾರಿಗಳು ತೀರಾ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದಾಗಿ ಈ ರಸ್ತೆಯಲ್ಲಿ ಈಗಾಗಲೇ ಹಲವಾರು ಬಾರಿ ವಾಹನ ಅಪಘಾತ ಸಂಭವಿಸಿದೆ ಎನ್ನುತ್ತಾರೆ ಸ್ಥಳೀಯರು. ಇದೀಗ ಸುಸಜ್ಜಿತ ಚರಂಡಿ ಅಥವಾ ಮೋರಿ ನಿರ್ಮಿಸದ ಪರಿಣಾಮ ರಸ್ತೆಯುದ್ದಕ್ಕೂ ಮಳೆ ಮತ್ತು ನೆರೆನೀರು ಹರಿದು ಈಜು ಕೊಳದಂತೆ ಭಾಸವಾಗುತ್ತಿದೆ. ಈ ರಸ್ತೆಯಲ್ಲಿ ವಾಹನ ಸಂಚರಿಸುವಾಗ ಬೈಕ್ ಸವಾರರು ಮತ್ತು ಪಾದಚಾರಿಗಳು ಸಂಚರಿಸಿದರೆ ಕೆಸರಿನ ಅಭಿಷೇಕವಾಗುತ್ತಿದೆ. ಇತ್ತೀಚಿಗಷ್ಟೇ ರಾಯಿ ಗ್ರಾಮ ಪಂಚಾಯಿತಿ ವತಿಯಿಂದ ಜೆಸಿಬಿ ಮೂಲಕ ಚರಂಡಿ ದುರಸ್ತಿಗೊಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿದ್ದೆಯಿಂದ ಎಚ್ಚೆತ್ತು ಈ ಬಗ್ಗೆ ಗಮನ ಹರಿಸಬೇಕು ಎಂದು ವಾಹನ ಸವಾರರು ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *