Header Ads
Breaking News

ಬಂಟ್ವಾಳದ ರೋಟರಿ ಕ್ಲಬ್‍ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

ಬಂಟ್ವಾಳ: ಬಂಟ್ವಾಳ ರೋಟರಿ ಕ್ಲಬ್‍ಗೆ ಜಿಲ್ಲಾ ಗವರ್ನರ್ ಅವರ ಅಧಿಕೃತ ಭೇಟಿ ಕಾರ್ಯಕ್ರಮ ಭಾನುವಾರ ನಡೆಯಿತು.ಬಿ.ಸಿ.ರೋಡಿನ ರೋಟರಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯೂ ಅವರು ಮಾತನಾಡಿ, ಬಂಟ್ವಾಳ ರೋಟರಿ ಕ್ಲಬ್ ಉತ್ತಮವಾದ ಕೆಲಸವನ್ನು ಮಾಡಿದೆ. ಜೀವನ ಸಂಧ್ಯಾ ಯೋಜನೆಯನ್ನು ಎಲ್ಲಾ ಕ್ಲಬ್‍ಗಳು ಉತ್ತವಾಗಿ ನಿರ್ವಹಣೆ ಮಾಡಿದ್ದು ಬಂಟ್ವಾಳ ಕ್ಲಬ್ ಸಾಧನೆ ಗಮನಾರ್ಹ ಎಂದರು. ವ್ಯಕ್ತಿಗೆ ಮಾನವೀಯತೇ ದೊಡ್ಡ ಸಂಪತ್ತು. ರೋಟರಿ ಸಂಸ್ಥೆ ಗೆ ಬೇಕಾಗಿರುವುದು ಇದೇ. ರೋಟರಿ ಸದಸ್ಯರು ಮಾನವೀಯತೆಯೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಾಗ ಜೀವನಕ್ಕೆ ಹೊಸ ಅರ್ಥ ಬರುತ್ತದೆ ಎಂದರು.

ಸಹಾಯಕ ಗವರ್ನರ್ ರಿತೇಶ್ ಬಾಳಿಗ ಕ್ಲಬ್ ಬುಲೆಟಿನ್ ರೋಟ್ವಾಲಾವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷೆ ಶಿವಾನಿ ಬಾಳಿಗ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ವಲಯ ಲೆಪ್ಟಿನೆಂಟ್ ಮಂಜುನಾಥ ಆಚಾರ್ಯ, ಸ್ಮಿತಾ ಸಲ್ದಾನ ರೋಟರಿ ಜಿಲ್ಲಾ ಪ್ರಥಮ ಮಹಿಳೆ ಆ್ಯನಿ ಹೆಲೆನ್ ಜೋಸೆಫ್ ಉಪಸ್ಥಿತರಿದರು. ಸರಕಾರಿ ಪದವಿ ಕಾಲಜು ಬಂಟ್ವಾಳ ಇಲ್ಲಿಗೆ ಕಂಪ್ಯೂಟರ್ ಲ್ಯಾಬನ್ನು ಕೊಡುಗೆಯಾಗಿ ನೀಡಲಾಗಿದ್ದು ಕಾಲೇಜಿನ ಪ್ರಾಂಶುಪಾಲ ಗಿರೀಶ್ ಭಟ್ ಅಜೆಕಲ ಗವರ್ನರ್ ಅವರಿಂದ ಸ್ಮರಣಿಕೆ ಸ್ವೀಕರಿಸಿದರು.

ಇಂಟರಾಕ್ಟ್ ಕ್ಲಬ್ ಸಂಯೋಜಕಕರಾದ ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಮಹೇಶ್ ಕರ್ಕೇರಾ, ಪೊಳಲಿ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ರಂಜಿತಾ, ಕಡೇಶಿವಾಲಯ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಕೃಷ್ಣ ಪ್ರಸಾದ್, ಪೆರ್ನೆ ಶ್ರೀ ರಾಮ ಚಂದ್ರ ಪದವಿ ಪೂರ್ವ ಕಾಲೇಜಿನ ಶಿಕ್ಷಕಿ ಇಂದಿರಾ ಅವರನ್ನು ಗೌರವಿಸಲಾಯಿತು. ಇದೇ ಕ್ಲಬ್‍ನ ಸದಸ್ಯ ಪ್ರಕಾಶ್ ಕಾರಂತ್ ಹಾಗೂ ವಾಣಿ ಕಾರಂತ್ ಅವರಿಗೆ ಮೇಜರ್ ಡೋನರ್ ಗೌರವ ನೀಡಿ ಸನ್ಮಾನಿಸಲಾತು. ಡಾ. ರಮೇಶಾನಂದ ಸೋಮಯಾಜಿ ಅವರನ್ನು ಗೌರವಿಸಲಾಯಿತು.

Related posts

Leave a Reply

Your email address will not be published. Required fields are marked *