Header Ads
Header Ads
Breaking News

ಬಂಟ್ವಾಳ:ನಕಲಿ ಆಧಾರ್ ಕಾರ್ಡ್ ತಯಾರಿ ಪತ್ತೆ ಜೆಡಿಎಸ್ ಮುಖಂಡನ ಮನೆಯಲ್ಲಿ ಪತ್ತೆ.

ಬಂಟ್ವಾಳದ ಕೆಳಗಿನ ಪೇಟೆಯಲ್ಲಿ ಪಕ್ಷವೊಂದರ ಮುಖಂಡರ ಮನೆಯೊಂದರಲ್ಲಿ ಸರ್ಕಾರದ ಅನುಮತಿ ಇಲ್ಲದೆ ಆಧಾರ್ ಚೀಟಿಗಳ ನೋಂದಣಿ ಕಾರ್ಯ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರ ಸಹಾಯದೊಂದಿಗೆ ದಾಳಿ ನಡೆಸಿದ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ಅಧಿಕಾರಿಗಳ ತಂಡ ಆಧಾರ್ ನೋಂದಣಿಗೆ ಉಪಯೋಗವಾಗುವ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ.ಕೆಳಗಿನಪೇಟೆಯ ಮನೆಗೆ ದಾಳಿ ನಡೆಸಿದ ಸಂದರ್ಭ ಅಲ್ಲಿ ಆಧಾರ್ ನೋಂದಣಿ ಕೇಂದ್ರವೇ ಕಾರ್ಯಾಚರಿಸುತ್ತಿದ್ದುದು ಕಂಡುಬಂದಿತು. ಒಂದು ಲ್ಯಾಪ್ ಟಾಪ್, ಒಂದು ಪ್ರಿಂಟರ್, ಒಂದು ಸ್ಕ್ಯಾನರ್, ಒಂದು ಐಸ್ಕ್ಯಾನ್, ಒಂದು ಬಯೋಮೆಟ್ರಿಕ್ ಸಿಸ್ಟಮ್, ಒಂದು ಡಿಜಿಟಲ್ ಕ್ಯಾಮರಾ, ಒಂದು ಜಿಪಿಎಸ್ ವ್ಯವಸ್ಥೆ ಅಲ್ಲಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಯಿತು. ತಪಾಸಣೆಯ ವೇಳೆ ಬುಧವಾರ 19, ಮಂಗಳವಾರ ೭೫ ನೋಂದಾವಣಿ ಆಗಿರುವುದು ಬೆಳಕಿಗೆ ಬಂದಿದೆ. ಕಡಬ ಪಂಚಾಯಿತಿ ವ್ಯಾಪ್ತಿಯಲ್ಲಿ ಆಧಾರ್ ನೋಂದಾಣಿ ಮಾಡಲು ಅನುಮತಿ ಇರುವುದಾಗ ಆರೋಪಿ ತಿಳಿಸಿದ್ದರೂ ತಪಾಸಣೆಯ ವೇಳೆ ಈ ಸಂಬಂಧ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ. ಆರೋಪಿಯ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ತಹಶೀಲ್ದಾರ್ ತಿಳಿಸಿದರು. ದಾಳಿ ನಡೆಸಿದ ತಂಡದಲ್ಲಿ ಬಂಟ್ವಾಳ ನಗರ ಠಾಣಾಧಿಕಾರಿ ಚಂದ್ರಶೇಖರ್, ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ತಾಲೂಕು ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ, ತಾಲೂಕು ಕಚೇರಿ ಸಿಬ್ಬಂದಿ ವಿಷುಕುಮಾರ್, ಗ್ರಾಮ ಲೆಕ್ಕಾಧಿಕಾರಿ ರಾಜು ಲಮಾಣಿ, ಸಿಬ್ಬಂದಿ ಸದಾಶಿವ ಕೈಕಂಬ, ಸುಂದರ, ಶೀತಲ್ ಭಾಗವಹಿಸಿದ್ದರು.

Related posts

Leave a Reply