Header Ads
Header Ads
Breaking News

ಬಂಟ್ವಾಳ: ಚಾಲಕರ ಪರವಾನಿಗೆ ವಶಕ್ಕೆ ಪಡೆಯುತ್ತಿರುವ ಪೊಲೀಸರ ಕ್ರಮಕ್ಕೆ ಖಂಡಸಿ ತಹಶೀಲ್ದಾರ್‌ರಿಗೆ ಮನವಿ

ಬಂಟ್ವಾಳ: ಶಾಲಾ ಮಕ್ಕಳ ವಾಹನಗಳ ಮೇಲೆ ಮೊಕದ್ದಮೆ, ಚಾಲಕರ ಪರವಾನಿಗೆ ವಶಕ್ಕೆ ಪಡೆಯುತ್ತಿರುವ ಪೊಲೀಸರ ಕ್ರಮವನ್ನು ವಿರೋಧಿಸಿ ಹಾಗೂ ಈ ವಾಹನದ ಮಿತಿಗಿಮ,ತ ಎರಡು ಪಟ್ಟು ಹೆಚ್ಚು ಮಕ್ಕಳನ್ನು ಸಾಗಿಸಲು ವಿನಾಯಿತಿ ನೀಡುವಂತೆ ಕೋರಿ ಶಾಲಾ ಮಕ್ಕಳ ವಾಹನ ಚಾಲಕರು ಮತ್ತು ಮಾಲಕರು ಬಂಟ್ವಾಳ ಪೊಲೀಸ್ ಉಪವಿಭಾಗದ ಎಎಸ್ಪಿ ಸೈದುಲ್ ಅಡಾವತ್ ಹಾಗೂ ಬಂಟ್ವಾಳ ತಹಶೀಲ್ದರಾರಿಗೆ ಮನವಿ ಸಲ್ಲಿಸಿದರು.

ಬಂಟ್ವಾಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲಾ ಮಕ್ಕಳ ಚಾಹನ ಚಾಲಕರು ಎಎಸ್ಪಿ ಹಾಗೂ ತಹಶೀಲ್ದಾರ್ ಅವರನ್ನು ಭೇಟಿಯಾಗಿ ತಾಲೂಕು ವ್ಯಾಫ್ತಿಯಲ್ಲಿ ಸುಮಾರು 500ಕ್ಕೂ ಅಧಿಕ ಮಂದಿ ಚಾಲಕರು ತುಂಬಾ ವರ್ಷದಿಂದ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಕೆಲಸ ಮಾಡುತ್ತಿದ್ದಾರೆ. ಆದರೆ ಇತ್ತೀಚಿನೆ ಕೆಲ ದಿನಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಮಕ್ಕಳನ್ನು ಕರೆದೊಯ್ದರೆ ಚಾಲಕನ ಪರವಾನಿಗೆಯನ್ನು ವಶಕ್ಕೆ ಪಡೆದು, ಸಾವಿರಾರು ರೂಪಾಯಿ ದಂಡ ವಿಧಿಸುತ್ತಿದ್ದಾರೆ. ಬಂಟ್ವಾಳ ತಾಲೂಕಿನಲ್ಲಿ 2500 ರಿಂದ 3500ರವರೆಗೆ ಮಕ್ಕಳ ಸರಕಾರಿ ಬಸ್ ಪಾಸ್ ಮಾಡಿದ್ದಾರೆ, ಆದರೆ ಸರಕಾರ ಒಂದೇ ಒಂದು ಬಸ್ಸನ್ನು ಹೆಚ್ಚಿಸದಿರುವುದರಿಂದ ವಿದ್ಯಾರ್ಥಿಗಳು ಬಸ್ಸಿನಲ್ಲಿ ನೇತಾಡಿಕೊಂಡು ಪ್ರಾಣ ಭಯದಲ್ಲಿ ಶಾಲೆ ಕಾಲೇಜ್‍ಗೆ ಹೋಗುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಮಾತನಾಡುವುದಿಲ್ಲ, ಆದರೆ ನಾವು ಮನೆ ಬಾಗಿಲಿನಿಂದ ಶಾಲೆಯ ಬಾಗಿಲಿನವರೆಗೆ ಯಾವುದೇ ತೊಂದರೆ ಇಲ್ಲದೆ ಮಕ್ಕಳನ್ನು ಕರೆದೊಯ್ದರೆ ನಮಗೆ ತಪಾಸಣೆಯ ಶಿಕ್ಷೆ ಇದೆ ಎಂದು ಶಾಲಾ ಮಕ್ಕಳ ವಾಹನ ಚಾಲಕರು ಅಳಲು ತೋಡಿಕೊಂಡರು.

ಈ ಸಂದರ್ಭ ಮ್ಯಾಕ್ಸಿಕ್ಯಾಬ್ ಹಾಗೂ ಟೆಂಪೋ ಚಾಲಕರ ಸಂಘದ ಅಧ್ಯಕ್ಷ ಸದಾನಂದ ನಾವೂರು, ಬಿಎಂಎಸ್ ರಿಕ್ಷಾಚಾಲಕರ ಸಂಘದ ಅಧ್ಯಕ್ಷ ವಸಂತ ಕುಮಾರ್, ಟೂರಿಸ್ಟ್ ಕಾರು ಮತ್ತು ವ್ಯಾನು ಚಾಲಕರ ಸಂಘದ ಅಧ್ಯಕ್ಷ ಪ್ರಭಾಕರ ದೈವಗುಡ್ಡೆ, ಪ್ರಮುಖರಾದ ಜಯರಾಮ ಬಿ.ಸಿ.ರೋಡು, ಇಕ್ಬಾಲ್, ಸೀತಾರಾಮ ಅಗೊಳಿಬೆಟ್ಟು ಮೊದಲಾದವರು

Related posts

Leave a Reply

Your email address will not be published. Required fields are marked *