Header Ads
Breaking News

ಬಂಟ್ವಾಳ ತಾಲೂಕಿನ ಸಾಲೆತ್ತೂರು ಐತ್ತಕುಮೇರುನಲ್ಲಿ ಬಾರಿ ದೊಡ್ಡ ಪ್ರಮಾಣದ ಕಸಾಯಿ ಖಾನೆ ಪತ್ತೆ

ವಿಟ್ಲ: ಸಾಲೆತ್ತೂರು ಎಂಬಲ್ಲಿ ವಿಟ್ಲ ಪೊಲೀಸರ ತಂಡ ಬಾರಿ ದೊಡ್ಡ ಪ್ರಮಾಣದ ಕಸಾಯಿಯಿ ಖಾನೆಗೆ ದಾಳಿ ಮಾಡಿ ಸುಮಾರು 200 ದನದ ಚರ್ಮ, 8ಜಾನುವಾರುಗಳು ಸಹಿತ ಹಲವು ವಾಹನಗಳನ್ನು ವಶಕ್ಕೆ ಪಡೆದ ಘಟನೆ ಸಂಬಂಧಿಸಿ ಆರೋಪಿ ಕಸಾಯಿಖಾನೆಯ ಬಗ್ಗೆ ಮಾಹಿತಿ ಸಮಗ್ರ ಮಾಹಿತಿ ನೀಡಿದ್ದು, ಜಿಲ್ಲೆಯ ಹಲವು ಜಾನುವಾರು ಕಳ್ಳತನ, ಕಸಾಯಿಖಾನೆ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.

ಕೊಳ್ನಾಡು ಕಟ್ಟತ್ತಿಲ ಮಠ ನಿವಾಸಿ ಹಾರಿಸ್ ಯಾನೇ ಮಹಮ್ಮದ್ ಹಾರೀಸ್ (22) ಬಂಧಿತ ಆರೋಪಿಯಾಗಿದ್ದಾನೆ. ದನ ಕಳ್ಳತನದ ಮಾಹಿತಿಯನ್ನು ಆಧರಿಸಿ ಪೊಲೀಸರ ತಂಡ ಕೊಳ್ನಾಡಿನ ಮನೆಯೊಂದಕ್ಕೆ ದಾಳಿ ನಡೆಸಿದ ಸಂದರ್ಭ ಹಾರೀಸ್ ಪಲಾಯನ ಮಾಡಲು ಯತ್ನಿಸಿದ್ದು, ತೋಟದಲ್ಲಿ ಬಿದ್ದು ಕಾಲಿಗೆ ಏಟು ಮಾಡಿಕೊಂಡಿದ್ದೂ ಅಲ್ಲದೆ ಪೊಲೀಸರ ಕೈಗೆ ಸಿಲುಕಿ ಹಾಕಿಕೊಂಡಿದ್ದಾನೆ. ಈತನ ವಿಚಾರಣೆ ಸಮಯದಲ್ಲಿ ಕಾಸಾಯಿಖಾನೆಯ ಮಾಹಿತಿ ಸಮಗ್ರ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.

ಮಾಹಿತಿ ಆಧಾರದಲ್ಲಿ ಸಾಲೆತ್ತೂರು ಐತ್ತಕುಮೇರು ಭಾಗಕ್ಕೆ ಪೊಲೀಸ್ ತಂಡ ದಾಳಿ ನಡೆಸಿದ್ದು, ೮ ಗೋವು, ೨೦೦ ದನದ ಚರ್ಮ ಸ್ಥಳದಲ್ಲಿ ಪತ್ತೆಯಾಗಿದೆ. ಅಕ್ರಮವಾಗಿ ಕಸಾಯಿಖಾನೆ ನಡೆಸಲು ಬಳಸಿದ್ದರೆನ್ನಲಾದ ನಾಲ್ಕು ದಿಚಕ್ರ ವಾಹನ, ಅಟೋ, ಅಕೋಶ್ ಲೈಲಾಂಡ್ ದೋಸ್ತು ವಾಹನ ಸೇರಿ ಹಲವು ಮಾಂಸ ಮಾಡಲು ಬಳಸುವ ಸಾಮಾಗ್ರಿಗಳನ್ನು ಸ್ಥಳದಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.

ಸ್ಥಳಕ್ಕೆ ಎಸ್‌ಪಿ ಡಾ. ಲಕ್ಷ್ಮೀ ಪ್ರಸಾದ್, ಡಿವೈಎಸ್‌ಪಿ ವೆಲೆಂಟನ್ ಡಿಸೋಜ್, ಪೊಲೀಸ್ ಇನ್‌ಸ್ಪೆಕ್ಟರ್ ಟಿ. ಡಿ. ನಾಗರಾಜ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಟ್ಲ ಎಸೈ ವಿನೋದ್ ಎಸ್. ಕೆ. ಅವರನ್ನೊಳಗೊಂಡ ಪೊಲೀಸ್ ಸಿಬ್ಬಂದಿಗಳಾದ ಜಯರಾಮ ಕೆ. ಟಿ., ಪ್ರತಾಪ ರೆಡ್ಡಿ, ವಿಶ್ವನಾಥ, ಶಂಕರ್, ಅಶೋಕ, ಹೇಮರಾಜ, ಡ್ಯಾನಿ ತ್ರಾವೋ, ವಿನೋದ್, ವಿಠಲ ಮತ್ತಿತರರ ತಂಡ ಕಾರ್ಯಾಚರಣೆ ನಡೆಸಿದೆ.

Related posts

Leave a Reply

Your email address will not be published. Required fields are marked *