Header Ads
Breaking News

ಬಂಟ್ವಾಳ ಪುರವಾಸ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾಮಹೋತ್ಸವ

ಬಂಟ್ವಾಳ ಪುರವಾಸ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ರಥೋತ್ಸವ ಬುಧವಾರ ರಾತ್ರಿ ವಿಜ್ರಂಭಣೆಯಿಂದ ನಡೆಯಿತು.

ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಗೊಳಪಟ್ಟ ಬಂಟ್ವಾಳದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾಮಹೋತ್ಸವ ಎ.14ರಂದು ಆರಂಭಗೊಂಡಿದ್ದು ಬುಧವಾರ ಗಣಹೋಮ, ಮಹಾಪೂಜೆ ನಡೆದು ಮಧ್ಯಾಹ್ನ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರೀ ದೇವರ ರಥಾರೋಹಣ ನಡೆಯಿತು.

ಸಂಜೆ ರಥಾರೂಡನಾದ ಶ್ರೀ ಮಹಾಲಿಂಗೇಶ್ವರ ದೇವರಿಗೆ ವೈಭವದ ರಥೋತ್ಸವ ಸೇವೆ ನೆರವೇರಿತು. ಸ್ಯಾಕ್ಸೋಪನ್, ವಾಲಗ, ಬ್ಯಾಂಡ, ತಾಳದ ಹಿಮ್ಮೇಳ ರಥೋತ್ಸವ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆ ಯಲ್ಲಿ ಪಾಲ್ಗೊಂಡು ಶ್ರೀ ಮಹಾಲಿಂಗೇಶ್ವರನ ತೇರು ಎಳೆಯುವ ಮೂಲಕ ಶ್ರೀ ದೇವರ ಕೃಪೆಗೆ ಪಾತ್ರರಾದರು. ಭಕ್ತರ ಜಯಘೋಷ ಮುಗಿಲು ಮುಟ್ಟಿತು. ಬಂಟ್ವಾಳದ ಪೇಟೆ ರಸ್ತೆಯಲ್ಲಿ ರಥವೇರಿ ಬಂದ ಶ್ರೀ ಮಹಾಲಿಂಗೇಶ್ವರ ದೇವರಿಗೆ ಭಕ್ತರು ಅಲ್ಲಲ್ಲಿ ಹೂ, ಹಣ್ಣುಕಾಯಿ ನೀಡಿ ಭಕ್ತಿ ಭಾವುಕತೆ ಮೆರೆದರು.

ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ರಮೇಶಾನಂದ ಸೋಮಾಯಾಜಿ, ಕಾರ್ಯನಿರ್ವಾಹಣಾಧಿಕಾರಿ ಪ್ರವೀಣ್ ಮೊದಲಾದವರು ಹಾಜರಿದ್ದರು.

Related posts

Leave a Reply

Your email address will not be published. Required fields are marked *