Header Ads
Header Ads
Breaking News

ಬಂಟ್ವಾಳ ಪುರಸಭಾ ವ್ಯಾಪ್ತಿಯ ಅಂಗಡಿಗಳಿಗೆ ದಾಳಿ

ಬಂಟ್ವಾಳದ ಪುರಸಭೆ ವ್ಯಾಪ್ತಿಯ ಬಡ್ಡಕಟ್ಟೆ ಹಾಗೂ ಬಂಟ್ವಾಳ ಪೇಟೆ ಪರಿಸರದ ಅಂಗಡಿಗಳಲ್ಲಿ ಪುರಸಭಾ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಪ್ಲಾಸ್ಟಿಕ್ ಕೈ ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಪ್ಲಾಸ್ಟಿಕ್ ಚೀಲಕ್ಕೆ ಪರ್ಯಾಯ ವ್ಯವಸ್ಥೆಕಲ್ಪಿಸದೆ ಕೈ ಚೀಲಗಳನ್ನು ವಶಪಡಿಸಿಕೊಂಡು ಅಂಗಡಿದಾರರ ಮೇಲೆ ದಂಡ ವಿಧಿಸಿರುವ ಅಧಿಕಾರಿಗಳ ಏಕಾಏಕಿ ಕಾರ್ಯಚರಣೆಯ ವಿರುದ ಆಕ್ರೋಶಗೊಂಡಿರುವ ಬಂಟ್ವಾಳ ಪೇಟೆಯ ವ್ಯಾಪಾರಿಗಳು, ವ್ಯಾಪರಸ್ಥರ ಮೇಲೆ ದಂಡ ಹಾಕುವ ಬದಲಿ ಪಾಸ್ಟಿಕ್ ತಯಾರಿಕಾ ಕಂಪೆನಿಗಳನ್ನೇ ಬಂದ್ ಮಾಡಿ ಪ್ಲಾಸ್ಟಿಕ್ ಮುಕ್ತ ಮಾಡಿ ಎಂದು ಪುರಸಭಾ ಮುಖ್ಯಾಧಿಕಾರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.ಭವಿಷ್ಯದ ಹಿತದೃಷ್ಟಿಯಿಂದ ಪ್ಲಾಸ್ಟಿಕ್ ನಿಷೇಧ ಕಾರ್ಯಚರಣೆ ಅಗತ್ಯವಾಗಿದ್ದು ಪುರಸಭೆಯ ಕಾರ್ಯ ಸ್ವಾಗತಾರ್ಹ. ಗ್ರಾಹಕರಿಗೆ ಪ್ಲಾಸ್ಟಿಕ್ ಚೀಲಗಳನ್ನು ನೀಡಬಾರದು ಎನ್ನುವ ಪುರಸಭೆ ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಲ್ಲ.

   

ಪ್ಲಾಸ್ಟಿಕ್ ಚೀಲಗಳನ್ನು ತಯಾರಿಸುವ ಕಂಪೆನಿಗಳ ಮೇಲೆ ದಂಡ ಹಾಕುವ ಬದಲು ಅನಿವಾರ್ಯವಾಗಿ ಮಾರಾಟ ಮಾಡುವ ವ್ಯಾಪರಿಗಳ ಮೇಲೆ ದಂಡ ವಿಧಿಸುವುದು ಸರಿಯಲ್ಲ. ಪ್ಲಾಸ್ಟಿಕ್ ಚೀಲ ತಯಾರಾಗದೇ ಇದ್ದರೆ ನಾವು ಗ್ರಾಹಕರಿಗೆ ನೀಡುವ ಸಂಭವವೇ ಇರುವುದಿಲ್ಲ. ಕಾರ್ಯಚರಣೆಯ ವೇಳೆ ದಿನವೊಂದಕ್ಕೆ ಐನ್ನೂರರಿಂದ ಒಂದು ಸಾವಿರ ರುಪಾಯಿ ವ್ಯಾಪಾರ ಮಾಡುವ ಸಣ್ಣ ವ್ಯಾಪಾರಿಗೆ ೫ ಸಾವಿರ ರೂಪಾಯಿ ದಂಡ ಹಾಕುವುದು ನ್ಯಾಯಸಮ್ಮತವಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಸಂದರ್ಭ ಬಂಟ್ವಾಳದ ವ್ಯಾಪಾರಿಗಳಾದ ಪ್ರಕಾಶ್ ಅಂಚನ್, ಮಹಾಬಲ ಬಂಗೇರ, ಅಬ್ದುಲ್ ಕಯ್ಯಾಂ, ಬಾಲಕೃಷ್ಣ ಪೂಜಾರಿ, ಸದಾಶಿವ ಭಂಡಾರಿ, ಭಾಸ್ಕರ ಪೂಜಾರಿ, ಮಹಮ್ಮದ್ ಸಮೀರ್ ಮತ್ತಿತರರು ಹಾಜರಿದ್ದರು.

Related posts

Leave a Reply