Header Ads
Breaking News

ಬಂಟ್ವಾಳ: ಮಿಥುನ್ ರೈ ಪರ ಕೆಪಿಸಿಸಿ ಕಾರ್ಯದರ್ಶಿ ಎ.ಅಶ್ವನಿ ಕುಮಾರ್ ರೈ ಪ್ರಚಾರ

ಬಂಟ್ವಾಳ: ಮತದಾರರನ್ನು ಭಾವನಾತ್ಮಕವಾಗಿ ಕೆರಳಿಸಿ ಅವರನ್ನು ಮೋಸ ಮಾಡುವ ಬಿಜೆಪಿಯವರ ತಂತ್ರಗಾರಿಕೆ ಈ ಬಾರಿಯ ಚುನಾವಣೆಯಲ್ಲಿ ನಡೆಯುವುದಿಲ್ಲ. ಮತದಾರರಿಗೆ ಮಂಕುಬೂದಿ ಎರಚುವ ಕಾಲ ಹೋಗಿದೆ. ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಈ ಬಾರಿ ರಾಹುಲ್ ಗಾಂಧಿ ಈ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ, ನ್ಯಾಯವಾದಿ ಎ.ಅಶ್ವನಿ ಕುಮಾರ್ ರೈ ಹೇಳಿದರು.

ಬಿ.ಸಿ.ರೋಡಿನಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಬಿ.ಸಿರೋಡಿನಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದ ಅವರು ವಿ4 ನ್ಯೂಸ್‍ನೊಂದಿಗೆ ಮಾತನಾಡಿ ಕಳೆದ ಬಾರಿ ಮೋದಿ ಸರಕಾರ ನೀಡಿರುವ ಆಶ್ವಾಸನೆಯನ್ನು ಮರೆತು, ಈ ಬಾರಿ ಕೇವಲ ಓಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಳಿನ್ ಕುಮಾರ್ ಕಟೀಲ್ ಅವರು ಕಳೆದ 2 ಅವಧಿಯಲ್ಲಿ ಮಾಡಿರುವ ಸಾಧನೆಯನ್ನು ಜನರು ನೋಡಿದ್ದಾರೆ. ಅತಂತ್ರ ಸ್ಥಿತಿಯಲ್ಲಿರುವ ಮಂಗಳೂರು ಫ್ಲೈಓವರ್, ಬಿ.ಸಿ.ರೋಡ್-ಸುರತ್ಕಲ್ ಚತುಷ್ಪಥ ಹೆದ್ದಾರಿ, ಬಿ.ಸಿ.ರೋಡ್ ಫ್ಲೈಓವರ್, ಹಾಸನ-ಬಿ.ಸಿ.ರೋಡ್ ಹೆದ್ದಾರಿ, ತೊಕ್ಕೊಟ್ಟು ನಗರ ಅಸ್ತವ್ಯಸ್ತಕ್ಕೆ ಉತ್ತರದಾಯಿತ್ವ ಇಲ್ಲದಂತಾಗಿದೆ ಎಂದು ಟೀಕಿಸಿದರು.

ಈ ಸಂದರ್ಭ ಪಕ್ಷದ ಪ್ರಮುಖರಾದ ಸಂಜೀವ ಪೂಜಾರಿ, ರಾಮಕೃಷ್ಣ ಆಳ್ವ, ಸದಾಶಿವ ಬಂಗೇರ, ಚಿತ್ತರಂಜನ್ ಶೆಟ್ಟಿ, ಮಹಮ್ಮದ್ ನಂದರಬೆಟ್ಟು, ಲುಕ್ಮಾನ್ ಕೈಕಂಬ, ಬಿ.ಮೋಹನ್, ರಹೀಂ ಪಿ.ಎ., ಮೊದಲಾದವರು ಭಾಗವಹಿಸಿ ಮತಯಾಚನೆ ನಡೆಸಿದರು.

Related posts

Leave a Reply

Your email address will not be published. Required fields are marked *