Header Ads
Header Ads
Breaking News

ಬಂಟ್ವಾಳ ರೋಟರಿ ಲೊರೆಟ್ಟೋ ಹಿಲ್ಸ್‌ನ ವತಿಯಿಂದ ಬಡಗ ಬೆಳ್ಳೂರಿನ ಭವಾನಿ ಕುಲಾಲ್ ಮನೆಗೆ ಸೋಲಾರ್ ಬೆಳಕು ಕೊಡುಗೆ

ವಿದ್ಯುತ್ ಸಂಪರ್ಕವಿಲ್ಲದೆ ಗುಡಿಸಲಿನಂತಿರುವ ಮನೆಯಲ್ಲಿ ಕಳೆದ ಐದು ವರ್ಷದಿಂದ ಒಬ್ಬಂಟಿಯಾಗಿ ಜೀವನ ನಡೆಸುತ್ತಿರುವ ಬಡಗ ಬೆಳ್ಳೂರು ಗ್ರಾಮದ ನೆಲ್ಲಿಮಾರ್ ನಿವಾಸಿ ಭವಾನಿ ಕುಲಾಲ್ ಅವರ ಮನೆಗೆ ಬಂಟ್ವಾಳ ರೋಟರಿ ಲೊರೆಟ್ಟೋ ಹಿಲ್ಸ್ ಸೋಲಾರ್ ಬೆಳಕನ್ನು ಕೊಡುಗೆಯಾಗಿ ನೀಡಿದೆ.

ಬಂಟ್ವಾಳ ರೋಟರಿ ಲೊರೆಟ್ಟೋ ಹಿಲ್ಸ್ ಪ್ರಾಯೋಜಕತ್ವದಲ್ಲಿ ಸೆಲ್ಕೋ ಸಂಸ್ಥೆ ಸೋಲಾರ್ ಸಿಸ್ಟಮನ್ನು ಭವಾನಿಯವರ ಮನೆಗೆ ಅಳವಡಿಸಿದೆ. ಮಂಗಳವಾರ ಸಂಜೆ ಬಂಟ್ವಾಳ ರೋಟರಿ ಲೊರೆಟ್ಟೋ ಹಿಲ್ಸ್ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ಅವರು ಸೋಲಾರ್ ವಿದ್ಯುತ್ ಉದ್ಘಾಟಿಸಿದರು. ಕಳೆದ 5ವರ್ಷದಿಂದ ಚಿಮಿಣಿ ಬೆಳಕಿನಲ್ಲೇ ರಾತ್ರಿ ಕಳೆಯುತ್ತಿದ್ದ ಭವಾನಿ ಕುಲಾಲ್ ಅವರಿಗೆ ರೋಟರಿ ಸಂಸ್ಥೆಯ ಈ ಕೊಡುಗೆ ನೆಮ್ಮದಿ ಮೂಡಿಸಿದೆ. ಈ ಸಂದರ್ಭ ಬಂಟ್ವಾಳ ರೋಟರಿ ಲೊರೆಟ್ಟೋ ಹಿಲ್ಸ್‌ನ ಕಾರ್ಯದರ್ಶಿ ಶೃತಿ ಮಾಡ್ತ, ನಿಕಟಪೂರ್ವ ಅಧ್ಯಕ್ಷ ಅವಿಲ್ ಮಿನೇಜಸ್, ನಿಕಟಪೂರ್ವ ಕಾರ್ಯದರ್ಶಿ ರಾಮಚಂದ್ರ ಶೆಟ್ಟಿಗಾರ್, ಸದಸ್ಯ ಅರುಣ್ ಮಾಡ್ತ, ಸೆಲ್ಕೋ ಸೋಲಾರ್ ಸಂಸ್ಥೆಯ ಮಾರ್ಕೆಟಿಂಗ್ ಮುಖ್ಯಸ್ಥ ರವೀಣ ಕುಲಾಲ್ ಹಾಜರಿದ್ದರು.ಭವಾನಿ ಕುಲಾಲ್ ಅವರ ಬದುಕಿನ ದಯಾನೀಯ ಸ್ಥಿತಿಯ ಬಗ್ಗೆ ವಿ4ನ್ಯೂಸ್ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

Related posts

Leave a Reply

Your email address will not be published. Required fields are marked *