Header Ads
Breaking News

ಬಂಟ್ವಾಳ ಲಯನ್ಸ್ ಸೇವಾ ಸಂಸ್ಥೆಯ ಆಶ್ರಯದಲ್ಲಿ ಲಯನ್ಸ್ ಜನಪದ ಸಂಭ್ರಮ

ಬಂಟ್ವಾಳದ ಲಯನ್ಸ್ ಸೇವಾ ಸಂಸ್ಥೆ ಇದರ ಆಶ್ರಯದಲ್ಲಿ ಲಯನ್ಸ್ ಜನಪದ ಸಂಭ್ರಮ ಬಿ.ಸಿ. ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಅವರಿಗೆ ಜನಪದ ಚಕ್ರವರ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಲಯನ್ಸ್ ಜಿಲ್ಲಾ ರಾಜ್ಯಪಾಲ ರೊನಾಲ್ಡ್ ಗೋಮ್ಸ್ ದಂಪತಿ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಕಲೆ, ಸಂಸ್ಕøತಿ, ಸಹಬಾಳ್ವೆ ನಮ್ಮ ಧರ್ಮದ ಮೂಲವಾಗಿದೆ. ಇದನ್ನು ನಮಗೆ ಸಮಗ್ರವಾಗಿ ಕಟ್ಟಿಕೊಟ್ಟು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದವರು ನಮ್ಮ ಜನಪದರು ಎಂದರು.

ಇದೇ ಸಂದರ್ಭ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಅವರಿಗೆ ಜನಪದ ಚಕ್ರವರ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರು ಮಾತನಾಡಿ ಪೂರ್ವಜರು ಉಪಯೋಗಿಸುತ್ತಿದ್ದ ಪ್ರತಿಯೊಂದು ವಸ್ತುವಿನಲ್ಲೂ ಐತಿಹಾಸಿಕ, ಜಾನಪದ ಹಿನ್ನೆಲೆಯಿದೆ. ಅವುಗಳಿಂದ ಸಾಮಾನ್ಯ ಮನುಷ್ಯನ ಬದುಕು, ಬವಣೆಗಳನ್ನು ಅರಿಯಲು ಸಾಧ್ಯ. ಇತಿಹಾಸವನ್ನು ಅರಿಯುವ ಮೂಲಕ ನಮ್ಮ ಶ್ರೀಮಂತ ಪರಂಪರೆ, ಸ್ವಾಭಿಮಾನದ ಬದುಕಿನ ದರ್ಶನವಾಗುತ್ತದೆ ಎಂದರು.

ಕಾರ್ಯಕ್ರಮದ ಪ್ರಧಾನ ಸಂಯೋಜಕ ದಾಮೋದರ ಬಿ.ಎಂ ಪ್ರಥಮ ಉಪರಾಜ್ಯಪಾಲ ಗೀತಪ್ರಕಾಶ್, ದ್ವಿತೀಯ ಉಪರಾಜ್ಯಪಾಲ ವಸಂತ್ ಕುಮಾರ್ ಶೆಟ್ಟಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ವಿಜಯ ವಿಷ್ಣು ಮಯ್ಯ, ಜಿಲ್ಲಾ ಸಂಪುಟ ಕಾರ್ಯದರ್ಶಿ ಹರೀಶ್ ಕೆ. ಶೆಟ್ಟಿ, ಜಿಲ್ಲಾ ಕಾರ್ಯಕ್ರಮಗಳ ಮುಖ್ಯ ಸಂಯೋಜಕ ಸಂಜಿತ್ ಶೆಟ್ಟಿ ಎಸ್., ಲಿಯೋ ಜಿಲ್ಲಾಧ್ಯಕ್ಷೆ ಶೀಬಾ ಲೋಕೇಶ್,ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಪ್ರಮುಖರಾದ ದೇವಿಕಾ ದಾಮೋದರ್, ಉಪನ್ಯಾಸಕಿ ಡಾ. ಆಶಾಲತ ಸುವರ್ಣ ಬಿ. ಸುಬ್ರಹ್ಮಣ್ಯ ಭಟ್, ಮಂಜುಳಾ ಪಿ.ಶೆಟ್ಟಿ, ಆಶಾನಾಗರಾಜ್, ದೇವಿಕಾ ಸೋಮಶೇಖರ್, ಉಮನಾಥ್, ರಘುವೀರ್ ರಾವ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *