Header Ads
Breaking News

ಬಂಟ್ವಾಳ ಸೌಹಾರ್ದತೆಯ ತಾಣ; ದೈವಾರಾಧನೆಯಲ್ಲಿ ಒಂದಾಗುತ್ತಾರೆ ಹಿಂದೂ ಮುಸ್ಲಿಮರು

ಬಂಟ್ವಾಳ: ಕೋಮುಸೂಕ್ಷ್ಮ ಪ್ರದೇಶವೆಂದು ಕರೆಯಲ್ಪಡುವ ಬಂಟ್ವಾಳ ತಾಲೂಕು ಸೌಹಾರ್ದತೆಯ ತಾಣ. ಆದರೆ ಯಾರೋ ಮಾಡಿದ ಗಲಭೆಗಳಿಗೆ ಕೋಮು ಸೂಕ್ಷ್ಮ ಪ್ರದೇಶವೆಂಬ ಹಣೆ ಪಟ್ಟಿಕೊಳ್ಳಬೇಕಾಗಿದೆ. ಆದರೆ ಇಲ್ಲಿನ ಸೌಹಾರ್ದತೆಗೆ ಸಾಕ್ಷಿ ಎಂಬಂತಿದೆ ಈ ದೃಶ್ಯ.

ತುಳುನಾಡು ದೈವರಾಧನೆಯ ಕೇಂದ್ರ. ದೈವರಾಧನೆ ಹಿಂದೂಗಳ ಆಚರಣೆ ಆದರೂ ಇಲ್ಲಿನ ಮುಸ್ಲಿಂ, ಕ್ರೈಸ್ತ ಬಂಧುಗಳು ದೈವಾರಧನೆಯನ್ನು ಶ್ರದ್ದಾ ಭಕ್ತಿಯಿಂದ ನಡೆಸುತ್ತಾ ಬಂದಿದ್ದಾರೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಈ ಮಾತನ್ನು ಪುಷ್ಡಿಕರೀಸುವಂತೆ ಶನಿವಾರ ಸಜೀಪಮಾಗಣೆಯ ನಾಲ್ಕೈತ್ತಾಯ ದೈವದ ಬಂಡಾರ ಹೋಗುವ ಸಂದರ್ಭದಲ್ಲೂ ಹಿಂದೂ ಮುಸ್ಲಿಮರ ಭಾವೈಕ್ಯತೆ ಬೆಸೆಯುವ ದೃಶ್ಯ ಗಮನ ಸೆಳೆದಿದೆ.

ಸಜಿಪ ಮಾಗಣೆಯ ಮಂಜದಗೋಳಿ ಎಂಬಲ್ಲಿ ಪ್ರತಿ ೩ವರ್ಷಕ್ಕೊಮೆ ನಾಲ್ಕೈತ್ತಾಯ ದೈವದ ಮೆಚ್ಚಿ ಜಾತ್ರೆ ನಡೆಯುತ್ತದೆ. ಈ ಸಂದರ್ಬ ಮಾಗಣೆಯ ದೈವ ನಾಲ್ಕೈತ್ತಾಯನ ಭಂಡಾರ ಸಜೀಪ ನಡುವಿನಿಂದ ಮಂಜದಗೋಳಿಗೆ ಹೋಗುವಾಗ ದಾರಿ ಮಧ್ಯದಲ್ಲಿ ಸಿಗುವ ನಂದಾವರ ಜುಮ್ಮಾ ಮಸೀದಿಯ ಬಳಿ ಎರಡು ಮೆಟ್ಟಿಲುಗಳನ್ನು ಹತ್ತಿ ಮಾಯದಲ್ಲಿ ಶೇಕ್ ಬ್ಯಾರಿಯನ್ನು ಭೇಟಿಯಾಗಿ ಕೈಕಾಣಿಕೆಯನ್ನು ಸ್ವೀಕರಿಸುವ ಮನಮೋಹಕ ದೃಶ್ಯ ಈ ಸಂದರ್ಭ ನಡೆಯುತ್ತದೆ.

ಇದೊಂದು ಅಪರೂಪದ ಕ್ಷಣವಾಗಿದ್ದು ಅಪಾರ ಸಂಖ್ಯೆಯಲ್ಲಿ ಹಿಂದೂ ಮುಸ್ಲಿಮರು ಇಲ್ಲಿ ಹಾಜರಿರುತ್ತರೆ. ದೈವಗಳಿಗೆ ಮಾನವರೆಲ್ಲರೂ ಒಂದೇ. ಕೋಮು ದ್ವೇಷಗಳೆಲ್ಲವೂ ಮಾನವ ಸೃಷ್ಡಿ ಎನ್ನುವಂತೆ ಈ ದೃಶ್ಯ ಸಾಕ್ಚೀಕರಿಸುವಂತಿದೆ. ಬಂಟ್ವಾಳ ಈ ಹಿಂದಿನಿಂದಲೂ ಸೌಹಾರ್ದತೆಯ ತಾಣ ಎನ್ನುವ ಸಂದೇಶವನ್ನು ಎತ್ತಿ ಹಿಡಿದಿದೆ.

Related posts

Leave a Reply

Your email address will not be published. Required fields are marked *