Header Ads
Header Ads
Header Ads
Breaking News

ಬಂದರು ಅಭಿವೃದ್ಧಿಗೆ ರಾಜ್ಯ ಸರಕಾರದಿಂದ ಹಲವು ಯೋಜನೆ ಕಾಸರಗೋಡಿನಲ್ಲಿ ಸಚಿವ ಕಡನ್ನಪಳ್ಳಿ ರಾಮಚಂದ್ರನ್ ಹೇಳಿಕೆ

ಕಾಸರಗೋಡು: ರಾಜ್ಯದ ಬಂದರುಗಳ ಅಭಿವೃದ್ಧಿಗೆ ಸರಕಾರ ಹಲವು ಯೋಜನೆಗಳನ್ನು ಅವಿಷ್ಕರಿಸಿದೆ ಎಂದು ರಾಜ್ಯ ಬಂದರು ಖಾತೆ ಸಚಿವ ಕಡನ್ನಪಳ್ಳಿ ರಾಮಚಂದ್ರನ್ ಹೇಳಿದರು. ಅವರು ಕಾಸರಗೋಡು ಬಂದರು ಕಚೇರಿ ಮತ್ತು ವಸತಿ ನಿಲಯದ ಉದ್ಘಾಟನೆ ನೆರವೇರಿಸಿ ಈ ವಿಚಾರವನ್ನು ತಿಳಿಸಿದರು.

ಉತ್ತರದ ಮಂಜೇಶ್ವರದಿಂದ ತಿರುವನಂತಪುರತನಕ ರಸ್ತೆ – ರೈಲು ಸಂಚಾರಕ್ಕೆ ಸಮಾಂತರವಾಗಿ ಹಡಗು ಸಂಚಾರ ಕುರಿತು ಚಿಂತನೆ ನಡೆಸಲಾಗುತ್ತಿದೆ. ಲಕ್ಷದ್ವೀಪಕ್ಕೆ ಸಂಪರ್ಕಿಸುವ ಹಡಗುಯಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಜಿಲ್ಲೆಯ ಆಳಿವೆ ಬಾಗಿಲು ಕೇಂದ್ರೀಕರಿಸಿ ನಡೆಸುತ್ತಿರುವ ಮರಳುಗಾರಿಕೆ ಮಾರಾಟದಿಂದ ತಿಂಗಳಿಗೆ ಒಂದು ಕೋಟಿ ರೂ ಕಾಸರಗೋಡು ಬಂದರು ಕಚೇರಿಗೆ ಲಭಿಸುತ್ತಿದೆ.

ಮರಳು ಗಾರಿಕೆಗೆ ಮಾಫಿಯಾ ತಂಡ , ಏಜೆನ್ಸಿಗಳಿಗೆ ಅವಕಾಶವಿಲ್ಲ . ಜಿಲ್ಲೆಯ ಪರಂಪರಾಗತ ಮರಳು ಕಾರ್ಮಿಕರಿಗೆ ಉದ್ಯೋಗ ನೀಡಲಾಗುವುದು. ನಿರ್ಮಾಣ ವಲಯಕ್ಕೆ‌ಅಡ್ಡಿಯಾಗದಂತೆ ಗುಣಮಟ್ಟದ ಮರಳು ಒದಗಿಸಲಾಗುವುದು ಎಂದು ಸಚಿವರು ಹೇಳಿದರು. ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಜನಪ್ರತಿನಿಧಿಗಳು , ಅಧಿಕಾರಿಗಳು ಮೊದಲಾದವರು ಪಾಲ್ಗೊಂಡರು.
ವರದಿ: ರೆಹಮಾನ್ ಉದ್ಯಾವರ, ಮಂಜೇಶ್ವರ

Related posts

Leave a Reply