Header Ads
Header Ads
Header Ads
Header Ads
Header Ads
Header Ads
Breaking News

ಬಡಗುಬೆಟ್ಟು ಗ್ರಾಮದ ಆಲಂಬಿ ಗುಡ್ಡೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಶವ ಪತ್ತೆ

ಉಡುಪಿ: ಮನೆಯ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಗಂಡಸಿನ ಶವವು ಕೊಳೆತ ಸ್ಥಿತಿಯಲ್ಲಿ 80 ಬಡಗುಬೆಟ್ಟು ಗ್ರಾಮದ ಆಲಂಬಿ ಗುಡ್ಡೆಯಲ್ಲಿ ಕಂಡು ಬಂದಿದೆ. ಮೃತ ವ್ಯಕ್ತಿ ಪಾಂಡುರಂಗ ನಾಯ್ಕ್ (55-ವ) ಕೂಲಿ ಕಾರ್ಮಿಕ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಕರಂಟ್ ಬಿಲ್ಲ್ ನೀಡುವವರು ಮನೆಗೆ ಬಂದಾಗ ಗಬ್ಬುವಾಸನೆ ಹರಡಿರುವುದನ್ನು ಕಂಡು ಗಮನಿಸಿದರಿಂದ ಘಟನೆ ಬೆಳಕಿಗೆ ಬಂದಿದೆ ಎಂಬ ಮಾಹಿತಿ ತಿಳಿದು ಬಂದಿದೆ. ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡು 5 ದಿನಗಳು ಕಳೆದಿರ ಬಹುದೆಂದು ಶಂಕಿಸಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಶವಸಾಗಿಸಲು ಉಚಿತ ಅಂಬುಲೇನ್ಸ್ ಸೇವೆ ಒದಗಿಸಿ ಪೊಲೀಸ್ ಇಲಾಖೆಗೆ ಸಹಕರಿಸಿದ್ದಾರೆ.

Related posts

Leave a Reply

Your email address will not be published. Required fields are marked *