Header Ads
Breaking News

ಬಡ ವಿದ್ಯಾರ್ಥಿಗಳಿಗೆ ಕಲಿಕೋಪಕರಣ ಕಿಟ್ ವಿತರಣೆ

ಮಂಜೇಶ್ವರ: ಕೇರಳ ಪ್ರದೇಶ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್ ಪ್ರಾಂತೀಯ ಸಮಿತಿ ನೇತೃತ್ವದಲ್ಲಿ ಗುರುಸ್ಪರ್ಶಮ್ ಯೋಜನೆಯ ಭಾಗವಾಗಿ ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ಬಡ ವಿದ್ಯಾರ್ಥಿಗಳಿಗೆ ಕಲಿಕೋಪಕಾರಣದ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು. ಜಿಡಬ್ಲ್ಯೂ ಎಲ್‍ಪಿಎಸ್ ಶಾಲೆಯಲ್ಲಿ ಸಂಘಟನೆಯ ಮಂಜೇಶ್ವರ ಉಪಜಿಲ್ಲಾ ಮಟ್ಟದ ಅಧ್ಯಕ್ಷ ರಾಧಾಕೃಷ್ಣ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷದ್ ವರ್ಕಾಡಿ ಮಕ್ಕಳ ಫೋಷಕರಿಗೆ ಕಿಟ್‍ಗಳನ್ನೂ ವಿತರಿಸಿ ಉದ್ಘಾಟಿಸಿದರು. ವಾರ್ಡ್ ಸದಸ್ಯ ಅಬ್ದುಲ್ಲಾ ಗುಡ್ಡಕ್ಕೇರಿ ಅತಿಥಿಯಾಗಿದ್ದರು. ಈ ಸಂದರ್ಭ ಶ್ರೀನಿವಾಸ್ ಕೆ ಎಚ್, ಸುಕೇಶ್, ಜಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *